
ಮ್ಯೂನಿಚ್: ಜರ್ಮನಿಯ ಮ್ಯೂನಿಚ್ ನಲ್ಲಿ ಭಾನುವಾರ ನಡೆದ ನೇಷನ್ಸ್ ಲೀಗ್ ಫೈನಲ್ ಪಂದ್ಯ 2-2 ಗೋಲುಗಳಿಂದ ಡ್ರಾ ಆದ ನಂತರ ಪೆನಾಲ್ಟಿ ಶೂಟೌಟ್ ನಲ್ಲಿ ಪೋರ್ಚಗಲ್ 5-3 ಗೋಲುಗಳಿಂದ ಸ್ಪೇನ್ ನನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ರೂಬೆನ್ ನೆವೆಸ್ ನಿರ್ಣಾಯಕ ಗೋಲು ಗಳಿಸಿದರು.
ನೇಷನ್ಸ್ ಲೀಗ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವೃತ್ತಿಜೀವನದಲ್ಲಿ ಮೂರನೇ ಅಂತರರಾಷ್ಟ್ರೀಯ ಟ್ರೋಫಿ ಮತ್ತು ಎರಡನೇ UEFA ನೇಷನ್ಸ್ ಲೀಗ್ ಪ್ರಶಸ್ತಿಯಾಗಿದೆ.
ಪಂದ್ಯ ಗೆದ್ದ ಬಳಿಕ ರೊನಾಲ್ಡೊ ಕಣ್ಣೀರು ಹಾಕಿದರು. ಗಾಯದ ಸಮಸ್ಯೆಯಿದ್ದರೂ ಆಟವಾಡಿದ್ದ ರೋನಾಲ್ಡ್ 88 ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಡ್ರಾ ಆಗಿದ್ದ ಪಂದ್ಯ ಪೆನಾಲ್ಟಿ ಶೂಟೌಟ್ ಪಡೆಯಲು ಕಾರಣವಾಯಿತು.
ಸ್ನಾಯು ಸೆಳೆತದಿಂದಾಗಿ ರೊನಾಲ್ಡೊ ಪಂದ್ಯದಿಂದ ಹೊರನಡೆಯಬೇಕಾಯಿತು. ಗಾಯದ ಸಮಸ್ಯೆಯಿಂದ ಆಡಿದ್ದಾಗಿ ಪಂದ್ಯದ ನಂತರ ಅವರು ಬಹಿರಂಗಪಡಿಸಿದರು. ಅಭ್ಯಾಸದ ಸಮಯದಲ್ಲಿಯೇ ಗಾಯದ ಸಮಸ್ಯೆಯಿದ್ದರೂ ಟ್ರೋಫಿಗಾಗಿ, ಆಡಬೇಕಾಗಿತ್ತು ಇದು. ನಮ್ಮ ದೇಶ. ಅದಕ್ಕಾಗಿ ಎಲ್ಲವನ್ನೂ ನೀಡಿದ್ದೇನೆ ಎಂದು ತಿಳಿಸಿದರು.
61 ನೇ ನಿಮಿಷದಲ್ಲಿ ತಮ್ಮ ವೃತ್ತಿಜೀವನದ 138 ನೇ ಗೋಲು ಗಳಿಸಿದರು, ಇದು ಪೋರ್ಚುಗಲ್‌ಗೆ 2-2 ಡ್ರಾ ಸಾಧಿಸುವಲ್ಲಿ ನೆರವಾಯಿತು. ಆದಾದ ಬಳಿಕ ಗಳಿಸಿದ ಎರಡನೇ ಗೋಲು ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಗೆ ಕಾರಣವಾಯಿತು. ತದನಂತರ ಅಲ್ಲಿ ಪೋರ್ಚುಗಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು.
Advertisement