'ವಿಶ್ವದ ನಂ.1 ಶ್ರೇಯಾಂಕವನ್ನು ನಾನು ಬೆನ್ನಟ್ಟಿಕೊಂಡು ಹೋಗಲಿಲ್ಲ': ರೋಹನ್ ಬೋಪಣ್ಣ

ಜೂನ್ 30 ರಿಂದ ನಡೆಯಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿರುವ ರೋಹನ್ ಬೋಪಣ್ಣ ಇತ್ತೀಚೆಗೆ ಎಸ್‌ಎಂ ಕೃಷ್ಣ ಕ್ರೀಡಾಂಗಣವನ್ನು ಉದ್ಘಾಟಿಸಿದರು.
Rohan Bopanna
ರೋಹನ್ ಬೋಪಣ್ಣ
Updated on

ಕ್ರಿಕೆಟ್ ಬಿಟ್ಟು ಬೇರೆ ಆಟವನ್ನು ಅಷ್ಟೊಂದು ವೈಭವೀಕರಿಸದ ಭಾರತದಲ್ಲಿ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯಂತಹ ದಿಗ್ಗಜರನ್ನು ಸಹ ಇದು ಸೃಷ್ಟಿಸಿದೆ ಎಂದರೆ ತಪ್ಪಲ್ಲ. ಕ್ರಿಕೆಟ್ ಆಟಗಾರರ ಖ್ಯಾತಿಗೆ ಪ್ರತಿಸ್ಪರ್ಧಿಯಾಗಿ ಸ್ಟಾರ್ ಸ್ಥಾನಮಾನಗಳನ್ನು ಗಳಿಸಿದರು ಮತ್ತು ಜಗತ್ತೇ ಅವರ ಪ್ರತಿಭೆಗಳತ್ತ ಗಮನ ಹರಿಸುವಂತೆ ಮಾಡಿದವರು.

ಟೆನಿಸ್ ಐಕಾನ್ ರೋಹನ್ ಬೋಪಣ್ಣ, ಈ ಶ್ರೇಷ್ಠರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಜೂನ್ 30 ರಿಂದ ನಡೆಯಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿರುವ ರೋಹನ್ ಬೋಪಣ್ಣ ಇತ್ತೀಚೆಗೆ ಎಸ್‌ಎಂ ಕೃಷ್ಣ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಕರ್ನಾಟಕ ಮತ್ತು ಅದರಾಚೆಗೆ ಟೆನಿಸ್‌ನ ಭವಿಷ್ಯದ ಬಗ್ಗೆ ಭರವಸೆ ಹೊಂದಿದ್ದಾರೆ.

ನಲವತ್ತೈದು ವರ್ಷದ ರೋಹನ್ ಬೋಪಣ್ಣ ಇತ್ತೀಚಿನವರೆಗೂ ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ. 1 ಸ್ಥಾನವನ್ನು ಹೊಂದಿದ್ದರು - ಮೊದಲ ಬಾರಿಗೆ ಶ್ರೇಯಾಂಕ ಪಡೆದ ಅತ್ಯಂತ ಹಿರಿಯ ಆಟಗಾರ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವಿಶ್ವ ನಂ. 1 ಶ್ರೇಯಾಂಕಕ್ಕಾಗಿ ನಾನು ಪ್ರತಿದಿನ ಬೆನ್ನಟ್ಟುತ್ತಾ ಹೋಗುತ್ತಿರಲಿಲ್ಲ. ನನ್ನ ಪ್ರಾಥಮಿಕ ಗಮನವು ಯಾವಾಗಲೂ ಸ್ಥಿರವಾದ ಸುಧಾರಣೆ, ಪ್ರಕ್ರಿಯೆಯನ್ನು ಆನಂದಿಸುವುದು ಮತ್ತು ತಂಡಕ್ಕೆ ನನ್ನಿಂದಾದ ಅತ್ಯುತ್ತಮವಾದದ್ದನ್ನು ನೀಡುವುದಾಗಿತ್ತು. ವರ್ಷಗಳ ಕಠಿಣ ಪರಿಶ್ರಮ, ನನ್ನ ಮೇಲಿನ ನಂಬಿಕೆಯಿಂದಾಗಿ ಸಾಧ್ಯವಾಗಿದೆ ಎಂದರು.

Rohan Bopanna
Paris Olympics 2024: ಒಲಿಂಪಿಕ್ಸ್ ನಿರ್ಗಮನದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟೆನಿಸ್​ಗೆ ಕನ್ನಡಿಗ ರೋಹನ್ ಬೋಪಣ್ಣ ವಿದಾಯ!

ಟೆನಿಸ್ ವಿಷಯಕ್ಕೆ ಬಂದಾಗ ಕರ್ನಾಟಕವು ಯಾವಾಗಲೂ ಮುಂಚೂಣಿಯಲ್ಲಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ​​(KSLTA) ನಂತಹ ಸಂಸ್ಥೆಗಳು, ತರಬೇತಿ ಮೂಲಸೌಕರ್ಯ ಮತ್ತು ಉನ್ನತ ಆಟಗಾರರನ್ನು ಉತ್ಪಾದಿಸುವ ಇತಿಹಾಸದಿಂದಾಗಿ ಸ್ಪರ್ಧಾತ್ಮಕ ಆಟದ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಬೆಂಬಲವೂ ಬೆಳೆಯುತ್ತಿದೆ. ಆದರೆ, ಚಿಕ್ಕ ವಯಸ್ಸಿನಿಂದಲೇ, ವಿಶೇಷವಾಗಿ ವೈವಿಧ್ಯಮಯ ಹಿನ್ನೆಲೆಯಿಂದ ಬಂದ ಪ್ರತಿಭೆಯನ್ನು ಪೋಷಿಸಲು ನಾವು ಇನ್ನೂ ಕೆಲಸ ಮಾಡಬೇಕಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಎಸ್‌ಎಂ ಕೃಷ್ಣ ಸ್ಮಾರಕ ಓಪನ್‌ನಂತಹ ಪಂದ್ಯಾವಳಿಗಳು ಟೆನಿಸ್ ಅಭಿವೃದ್ಧಿಗೆ ಏನು ಮಾಡಬಹುದು ಎಂದು ಕೇಳಿದಾಗ, ಇಂತಹ ಪಂದ್ಯಾವಳಿಗಳು ನಿರ್ಣಾಯಕ. ಅವು ಅಮೂಲ್ಯವಾದ ಮಾನ್ಯತೆ, ರ‍್ಯಾಂಕ್ ಅಂಕಗಳು ಮತ್ತು ಆಟಗಾರರು ದೇಶವನ್ನು ತೊರೆಯದೆ ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com