
ಫೋರ್ಡ್: ಭಾರತದ ಭರವಸೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಹಸ ಮೆರೆದಿದ್ದಾರೆ.
ನಾರ್ವೆಯ ಫೋರ್ಡ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.
ಮೂರು ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಕಣಕ್ಕಿಳಿದ್ದ ಅವರು ಪದಕದೊಂದಿಗೆ ಕಮ್‌ಬ್ಯಾಕ್ ಮಾಡಿದರು. ಉತ್ತರ ಕೊರಿಯಾದ ರಿ ಸಾಂಗ್ ಗಮ್ ವಿಶ್ವ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನ ಗೆದ್ದರೆ, ಥೈಲ್ಯಾಂಡ್‌ನ ಥಾನ್ಯಾಥಾನ್ ಸುಖರೋಯೆನ್ ಕಂಚಿನ ಪದಕ ಗೆದ್ದರು.ಮೀರಾಬಾಯಿ ಸ್ನ್ಯಾಚ್‌ನಲ್ಲಿ 84 ಕೆಜಿ ಎತ್ತಿದ್ದರೆ, ಕ್ಲೀನ್ ಆಂಡ್ ಜರ್ಕ್‌ನಲ್ಲಿ 115 ಕೆಜಿ ತೂಕ ಎತ್ತಿದರು
ಒಟ್ಟಾರೆ ಟೂರ್ನಿಯಲ್ಲಿ ಮೀರಾಬಾಯಿ ಗೆದ್ದ ಮೂರನೇ ಪದಕ ಇದಾಗಿದೆ. ಇದಕ್ಕೂ ಮೊದಲು ಮೀರಾಬಾಯಿ 2017 ರಲ್ಲಿ ಅನಾಹೈಮ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2022 ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಚಾನು ಅವರ ಈ ಸಾಧನೆಯು ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 18 ಕ್ಕೆ ಏರಿಸಿದೆ.
ಕಳೆದ ತಿಂಗಳು, ಅಹಮದಾಬಾದ್‌ನಲ್ಲಿ ನಡೆದ 2025 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾನು 193 ಕೆಜಿ (84 ಕೆಜಿ ಸ್ನ್ಯಾಚ್, 109 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತುವ ಮೂಲಕ ಚಿನ್ನ ಗೆದ್ದಿದ್ದರು. ಈ ಗೆಲುವಿನೊಂದಿಗೆ 2026 ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಪಡೆದಿದ್ದರು.
ಉತ್ತರ ಕೊರಿಯಾದ ರಿ ಸಾಂಗ್ ಗಮ್ ಈ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. ಸ್ನ್ಯಾಚ್‌ನಲ್ಲಿ 91 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 122 ಕೆಜಿ ಒಟ್ಟು 213 ಕೆಜಿ ಭಾರ ಎತ್ತಿದರು.
ಅವರ ಕೊನೆಯ ಎರಡು ಲಿಫ್ಟ್‌ಗಳು - 120 ಕೆಜಿ ಮತ್ತು 122 ಕೆಜಿ - ಕ್ಲೀನ್ ಮತ್ತು ಜರ್ಕ್ ಮತ್ತು ಒಟ್ಟು ಎರಡರಲ್ಲೂ ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದವು. ಥೈಲ್ಯಾಂಡ್‌ನ ಥಾನ್ಯಾಥೋನ್ ಸುಕ್ಚರೋಯೆನ್ ಒಟ್ಟು 198 ಕೆಜಿ (88 ಕೆಜಿ ಸ್ನ್ಯಾಚ್, 110 ಕೆಜಿ ಕ್ಲೀನ್ ಮತ್ತು ಜರ್ಕ್) ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು.
Advertisement