US Open title: ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಟ್ಟ ಅರಿನಾ ಸಬಲೆಂಕಾ

ನಂ. 1-ಶ್ರೇಯಾಂಕಿತ ಸಬಲೆಂಕಾ ಹಿಂದಿನ ಪ್ರಶಸ್ತಿ ಪಂದ್ಯಗಳಿಗಿಂತ ಭಿನ್ನವಾಗಿ ಆಡಿದ್ದಾರೆ. ಅನಿಸಿಮೋವಾ ಅವರನ್ನು 6-3, 7-6 (3) ಸೆಟ್‌ಗಳಿಂದ ಸೋಲಿಸಿದರು.
Aryna Sabalenka, of Belarus, holds her trophy aftyer defeating Amanda Anisimova, of the United States, after the women's finals of the U.S. Open tennis championships
ನ್ಯೂಯಾರ್ಕ್‌ನಲ್ಲಿ ನಡೆದ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ನ ಮಹಿಳಾ ಫೈನಲ್‌ನ ನಂತರ, ಬೆಲಾರಸ್‌ನ ಅರಿನಾ ಸಬಲೆಂಕಾ, ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು
Updated on

ನ್ಯೂಯಾರ್ಕ್: ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಅರಿನಾ ಸಬಲೆಂಕಾ ಚಾಂಪಿಯನ್ ಆಗಿದ್ದಾರೆ. USTA ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್​ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ವಿಶ್ವದ ಏಳನೇ ಶ್ರೇಯಾಂಕದ ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು 6-3, 7-6 (7-3) ನೇರ ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಮತ್ತೊಮ್ಮೆ ಯುಎಸ್​ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ನಂ. 1-ಶ್ರೇಯಾಂಕಿತ ಸಬಲೆಂಕಾ ಹಿಂದಿನ ಪ್ರಶಸ್ತಿ ಪಂದ್ಯಗಳಿಗಿಂತ ಭಿನ್ನವಾಗಿ ಆಡಿದ್ದಾರೆ. ಅನಿಸಿಮೋವಾ ಅವರನ್ನು 6-3, 7-6 (3) ಸೆಟ್‌ಗಳಿಂದ ಸೋಲಿಸಿದರು. 2012-14ರಲ್ಲಿ ಸೆರೆನಾ ವಿಲಿಯಮ್ಸ್ ನಂತರ ಸತತ ವರ್ಷಗಳಲ್ಲಿ ಫ್ಲಶಿಂಗ್ ಮೆಡೋಸ್‌ನಲ್ಲಿ ಟ್ರೋಫಿಯನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಬಲೆಂಕಾ ಪಾತ್ರರಾಗಿದ್ದಾರೆ.

2024 ರ ಫೈನಲ್​ನಲ್ಲಿ ಜೆಸ್ಸಿಕಾ ಪೆಗುಲಾ ಅವೆರನ್ನು ಮಣಿಸಿ ಅರಿನಾ ಸಬಲೆಂಕಾ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ 27 ವರ್ಷದ ಅರಿನಾ ಸಬಲೆಂಕಾ ಅವರಿಗೆ ಇದು ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.

ಇದಕ್ಕೂ ಮುನ್ನ ಅರಿನಾ 2023, 2024ರ ಆಸ್ಟ್ರೇಲಿಯನ್ ಓಪನ್, 2024ರ ಯುಎಸ್ ಓಪನ್ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಯುಎಸ್ ಓಪನ್​ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com