ಟೆನಿಸ್ ದಿಗ್ಗಜ ಜೊಕೊವಿಕ್ ರನ್ನು ಸೋಲಿಸಿ ಇತಿಹಾಸ ಸೃಷ್ಟಿ: ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗೆದ್ದ ಅಲ್ಕರಾಜ್

24 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ನೊವಾಕ್ ಜೊಕೊವಿಕ್ ವಿರುದ್ಧ 22 ವರ್ಷದ ಸ್ಪ್ಯಾನಿಷ್ ಹೀರೋ ಕಾರ್ಲೋಸ್ ಅಲ್ಕರಾಜ್ ಮೊದಲ ಸೆಟ್ ಸೋತರೂ ಮುಂದಿನ ಮೂರು ಸೆಟ್‌ಗಳಲ್ಲಿ 2-6, 6-2, 6-3, 7-5 ರಿಂದ ಸೋಲಿಸುವ ಮೂಲಕ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು.
Carlos Alcaraz
ಕಾರ್ಲೋಸ್ ಅಲ್ಕರಾಜ್
Updated on

24 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ನೊವಾಕ್ ಜೊಕೊವಿಕ್ ವಿರುದ್ಧ 22 ವರ್ಷದ ಸ್ಪ್ಯಾನಿಷ್ ಹೀರೋ ಕಾರ್ಲೋಸ್ ಅಲ್ಕರಾಜ್ ಮೊದಲ ಸೆಟ್ ಸೋತರೂ ಮುಂದಿನ ಮೂರು ಸೆಟ್‌ಗಳಲ್ಲಿ 2-6, 6-2, 6-3, 7-5 ರಿಂದ ಸೋಲಿಸುವ ಮೂಲಕ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಆಸ್ಟ್ರೇಲಿಯನ್ ಓಪನ್ ಹಾರ್ಡ್‌ಕೋರ್ಟ್‌ಗಳಲ್ಲಿ ಇದು ಕಾರ್ಲೋಸ್ ಅಲ್ಕರಾಜ್ ಅವರ ಮೊದಲ ಪ್ರಶಸ್ತಿಯಾಗಿದೆ. ಈ ಗೆಲುವಿನೊಂದಿಗೆ, ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಅತ್ಯಂತ ಕಿರಿಯ ಪುರುಷ ಆಟಗಾರ ಎಂಬ ದಾಖಲೆಯನ್ನು ಅಲ್ಕರಾಜ್ ಹೊಂದಿದ್ದಾರೆ.

ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ನಂ. 1 ಆಗಿರುವ ಅಲ್ಕರಾಜ್, ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಸಾಧಿಸಿದ ಹೊಸ ಯುಗದ ಆರನೇ ಆಟಗಾರರಾದರು. 21ನೇ ಶತಮಾನದಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಪೂರ್ಣಗೊಳಿಸಿದ್ದಾರೆ. 2016ರಲ್ಲಿ ಜೊಕೊವಿಕ್ ಈ ಸಾಧನೆ ಮಾಡಿದ್ದರು. ಅವರಿಗಿಂತ ಮೊದಲು ರಾಫೆಲ್ ನಡಾಲ್ (2010) ಮತ್ತು ರೋಜರ್ ಫೆಡರರ್ (2009). 22ನೇ ವಯಸ್ಸಿನಲ್ಲಿ ಅಲ್ಕರಾಜ್ ಈ ಗಣ್ಯರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಅವರನ್ನು ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಇರಿಸುವ ದಾಖಲೆಯಾಗಿದೆ.

Carlos Alcaraz
ಪ್ರಧಾನಿ ಭೇಟಿಯಾದ ನೀರಜ್ ಚೋಪ್ರಾ; ಕ್ರೀಡೆ ಬಗ್ಗೆ ಉತ್ತಮ ಚರ್ಚೆ ಎಂದ ಮೋದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com