ಏಷ್ಯನ್ ಗೇಮ್ಸ್ 2026: ರಿಲೆಯಲ್ಲಿ ಚಿನ್ನದ ಪದಕ ಗೆದ್ದ ಪೂವಮ್ಮಗೆ ಸಿಎಂ ಡಿ.ಕೆ ಶಿವಕುಮಾರ್ ಅಭಿನಂದನೆ! Video

ಪೂವಮ್ಮ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಿವಕುಮಾರ್, ಅವರ ಸಾಧನೆಯನ್ನು ಶ್ಲಾಘಿಸಿದರು. ಅವರ ಪ್ರದರ್ಶನ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.
CM DK Shivakumar and Poovamma
ಸಿಎಂ ಡಿಕೆ ಶಿವಕುಮಾರ್, ಪೂವಮ್ಮ
Updated on: 

ಬೆಂಗಳೂರು: ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ 4x400 ಮೀಟರ್ ರಿಲೆಯಲ್ಲಿ ಚಿನ್ನ ಹಾಗೂ ಮಿಶ್ರ ವಿಭಾಗದಲ್ಲಿ 4x400 ಮೀಟರ್ ರಿಲೆಯಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಅಭಿನಂದಿಸಿದ್ದಾರೆ.

ಪೂವಮ್ಮ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಿವಕುಮಾರ್, ಅವರ ಸಾಧನೆಯನ್ನು ಶ್ಲಾಘಿಸಿದರು. ಅವರ ಪ್ರದರ್ಶನ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.

ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಯಾವಾಗಲೂ ಅಥ್ಲೆಟಿಕ್ಸ್ ವೀಕ್ಷಿಸುತ್ತೇನೆ. ನಿಮಗೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ನಾವು ಸಹಾಯ ಮಾಡುತ್ತೇವೆ. ನಿಮ್ಮ ತಂಡದ ಸದಸ್ಯರಿಗೂ ಶುಭ ಹಾರೈಸುತ್ತೇನೆ. ನೀವು ಸಾಧನೆ ಮಾಡಿದ್ದೀರಿ ಮತ್ತು ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಸಿಎಂ ಪ್ರಶಂಸಿಸಿದ್ದಾರೆ.

ಅಲ್ಲದೆ, ಅಕ್ಟೋಬರ್ 6 ರಂದು ತಮ್ಮನ್ನು ಭೇಟಿಯಾಗುವಂತೆಯೂ ಅವರು ಪೂವಮ್ಮ ಅವರಿಗೆ ಆಹ್ವಾನ ನೀಡಿದ್ದಾರೆ.

ಕರ್ನಾಟಕದ ಕ್ರೀಡಾ ಪ್ರತಿಭೆಗಳನ್ನು ಬೆಂಬಲಿಸಲು ಮತ್ತು ಕ್ರೀಡಾಪಟುಗಳು ಉನ್ನತ ಸಾಧನೆ ಮಾಡಲು ಸಹಾಯ ಮಾಡುವ ರಾಜ್ಯ ಸರ್ಕಾರದ ಬದ್ಧತೆಯನ್ನು ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ.

ಕರ್ನಾಟಕದವರಾದ ಪೂವಮ್ಮ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ದೇಶದ ಯಶಸ್ವಿ 4x400 ಮೀಟರ್ ರಿಲೇ ತಂಡಗಳ ಭಾಗವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com