

ಭಾರತೀಯ ಅಥ್ಲೀಟ್ ಸೀಮಾ ಕುಮಾರಿ ಗುರುವಾರ 2026ರ ಏಷ್ಯನ್ ಗೇಮ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಮೂಲಕ 16 ವರ್ಷಗಳ ಬರಗಾಲವನ್ನು ಕೊನೆಗೊಳಿಸಿದರು. ಮಹಿಳೆಯರ 10,000 ಮೀಟರ್ ಫೈನಲ್ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಿತು. ಅಲ್ಲಿ ಸೀಮಾ ಕುಮಾರಿ 32:50.05 ಸೆಕೆಂಡುಗಳ ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು. ಇದಕ್ಕೂ ಮೊದಲು, 2010ರಲ್ಲಿ ಭಾರತದ ಪ್ರೀಜಾ ಶ್ರೀಧರನ್ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದು ಕವಿತಾ ರಾವುತ್ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಸೀಮಾ ಈ ಓಟದಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಅಥ್ಲೀಟ್ ಆಗಿದ್ದಾರೆ. ಬಹ್ರೇನ್‌ನ ವಿನ್‌ಫ್ರೆಡ್ ಯಾವಿ 32:39.18 ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆದ್ದರೇ ಜಪಾನ್‌ನ ನೊಜೊಮಿ ತನಕಾ 32:41.54 ಸೆಕೆಂಡುಗಳ ಸಮಯದೊಂದಿಗೆ ಬೆಳ್ಳಿ ಪದಕ ಪಡೆದರು.