ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ದಾಖಲೆ: ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ನೀರೂ ಧಾಂಡಾ

ಏಷ್ಯನ್ ಕ್ರೀಡಾಕೂಟದಲ್ಲಿ ಟ್ರ್ಯಾಪ್ ಅಥವಾ ಸ್ಕೀಟ್ ಶೂಟಿಂಗ್ ವಿಭಾಗದಲ್ಲಿ ವೈಯಕ್ತಿಕ ಪದಕ ಗೆದ್ದ ಯಾವುದೇ ಭಾರತೀಯ ಮಹಿಳಾ ಶೂಟರ್ ಈ ಹಿಂದೆ ಇರಲಿಲ್ಲ.
Neeru Dhanda
ಏಷ್ಯನ್ ಗೇಮ್ಸ್online desk
Updated on: 

ಮಂಗಳವಾರ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನೀರು ಧಾಂಡಾ ಇತಿಹಾಸ ನಿರ್ಮಿಸಿದ್ದಾರೆ. ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಹರಿಯಾಣದ 26 ವರ್ಷದ ಕ್ರೀಡಾಪಟು, ಕಳೆದ ಜುಲೈನಲ್ಲಿ ಇಟಲಿಯಲ್ಲಿ ನಡೆದ ಶಾಟ್‌ಗನ್ ವಿಶ್ವಕಪ್‌ನ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆ ಮಾಡಿದ್ದರು. ಇದೀಗ ಏಷ್ಯನ್ ಕ್ರೀಡಾಕೂಟದಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ, ಈ ಹಿಂದಿನ 24 ಅಂಕಗಳ ಏಷ್ಯನ್ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ಟ್ರ್ಯಾಪ್ ಅಥವಾ ಸ್ಕೀಟ್ ಶೂಟಿಂಗ್ ವಿಭಾಗದಲ್ಲಿ ವೈಯಕ್ತಿಕ ಪದಕ ಗೆದ್ದ ಯಾವುದೇ ಭಾರತೀಯ ಮಹಿಳಾ ಶೂಟರ್ ಈ ಹಿಂದೆ ಇರಲಿಲ್ಲ.

ಇದು ನೀರು ಅವರಿಗೆ ಆ ದಿನದ ಎರಡನೇ ಪದಕವಾಗಿತ್ತು. ಇದಕ್ಕೂ ಮುನ್ನ ಅವರು ಮಹಿಳಾ ಟ್ರ್ಯಾಪ್ ತಂಡದ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

Neeru Dhanda
Asian Games: ಇರಾನ್ ವಿರುದ್ಧ ಗೆಲುವು; ಕಬಡ್ಡಿಯಲ್ಲಿ ಭಾರತ ಪುರುಷರ ತಂಡಕ್ಕೆ ಚಿನ್ನದ ಪದಕ

ಮಹಿಳಾ ತಂಡದ ವಿಭಾಗದಲ್ಲಿ ನೀರು ಧಾಂಡಾ (118), ಆಶಿಮಾ ಅಹ್ಲಾವತ್ (106) ಮತ್ತು ಮನೀಶಾ ಕೀರ್ (104) ಅವರನ್ನೊಳಗೊಂಡ ತಂಡವು ಒಟ್ಟು 328 ಅಂಕಗಳನ್ನು ಗಳಿಸಿತು. ಈ ಮೂಲಕ, ಚಿನ್ನದ ಪದಕ ಗೆದ್ದ ಚೀನಾ (346 ಅಂಕಗಳು) ತಂಡದ ನಂತರದ ಸ್ಥಾನವನ್ನು ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com