ನ್ಯಾನೋಕಥೆಗಳು

Updated on: 

    ಅವಳ ಆತ್ಮೀಯ ಸ್ನೇಹಿತನಾಗಿದ್ದ ಅವನು, ತನ್ನ ಅಮೂಲ್ಯ ಸ್ನೇಹ ಕಳೆದುಕೊಂಡ- ಅವಳ ಗಂಡನಾದ!
=
    'ಅಪಘಾತ' ಎಂಬ ಕಥೆ ಬರೆಯುತ್ತಿದ್ದ ಕಥೆಗಾರನೊಬ್ಬ, ಕಥೆಯ ಕಲ್ಪನೆಯಲ್ಲೇ ಸಾಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಲಾರಿಯೇಕೋ ಕಾಣಲೇ ಇಲ್ಲ!
=
    ಅಂದು ಇಂಗ್ಲಿಷ್ ಬಾರದವನೆಂದು ಅವನ ಪ್ರೇಮವನ್ನು ನಿರಾಕರಿಸಿದ ಆಕೆ, ಇಂದು ಕನ್ನಡದಲ್ಲಿ ಭಗ್ನಪ್ರೇಮ- ಕವಿತೆಗಳನ್ನು ಬರೆದೇ ಪ್ರಸಿದ್ಧಿ ಪಡೆದ ಆತನನ್ನು ಕಂಡು ಹಲ್ಲು ಗಿಂಜುತ್ತಿದ್ದಾಳೆ!
=
    'ತಾಯಿಯೆಲ್ಲಿ ರೊಟ್ಟಿಗೆ ಬಾಯಿ ಹಾಕುವಳೋ' ಎಂಬ ಆತಂಕದಿಂದ ಮರಿನಾಯಿಗಳು ಆಹಾರವನ್ನು ಗಬಗಬನೆ ಮುಕ್ಕುತ್ತಿದ್ದರೆ, 'ಇಷ್ಟೇ ರೊಟ್ಟಿ ತನ್ನ ನಾಲ್ಕು ಮರಿಗಳ ಹೊಟ್ಟೆ ತುಂಬಿಸುವುದಿಲ್ಲವಲ್ಲ' ಎಂಬ ಆತಂಕದಿಂದ ತಾಯಿನಾಯಿ ಮರಿಗಳೆಡೆಗೆ ಕನಿಕರದಿಂದ ನೋಡುತ್ತಿತ್ತು.
=
ವಿಚ್ಛೇದನವಾದ ನಂತರ ಬರೆದೂ ಬರೆದೂ ಪ್ರಸಿದ್ಧಿಯಾದ ಲೇಖಕಿಯೊಬ್ಬಳು ಸಾಯುವ ಮಾಜಿ ಗಂಡನಿಗೊಂದು ಪತ್ರ ಬರೆದಳು- 'ನೀವು ನನ್ನ ಕಡೆಗಣಿಸಿ ಒಂಟಿಯಾಗಿಸದೇ ಹೋಗದಿದ್ದರೆ ಲೇಖನಿ ನನ್ನ ಸಂಗಾತಿ ಆಗುತ್ತಿರಲಿಲ್ಲ!'
-ರಮ್ಯಾ ಸುಬ್ರಹ್ಮಣ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com