ಪ್ರಾದೇಶಿಕ ಸೊಗಡನ್ನು ಬಡಿಸುತ್ತಾ, ಬ್ಲಾಗುಗಳೂ ಭಾಷೆಯನ್ನು ಕಟ್ಟುತ್ತಿವೆ. ತುಳುವಿನಲ್ಲಿ, ಕುಂದಾಪ್ರ ಕನ್ನಡದಲ್ಲಿ (ಹೊಯ್ಕುಬರ್ಕು), ಕೊಡವದಲ್ಲಿ, ಹೈ-ಕ ಭಾಷೆಯಲ್ಲಿ ಅನೇಕ ಬ್ಲಾಗುಗಳಿವೆ. ಹಾಗೆಯೇ ಹವ್ಯಕರಿಗೂ ಒಂದು ಬ್ಲಾಗ್ ಇದೆ. ಅದರ ಹೆಸರು ಒಪ್ಪಣ್ಣ.ಕಾಂ. (http://oppanna.com). ಹವ್ಯಕ ಭಾಷೆ ಪರಿಚಯ, ಹರಟೆ, ವಾರ್ತಾವಿಶೇಷ ಎಲ್ಲವೂ ಈ ಒಪ್ಪಣ್ಣನ ಬ್ಲಾಗಿನಂಗಡಿಯಲ್ಲಿದೆ. ಹವ್ಯಕ ಅರ್ಥವೇ ಆಗುವುದಿಲ್ಲ ಎನ್ನುವವರಿಗೆ ಈ ಬ್ಲಾಗು ಒಂದು ಪಾಠಶಾಲೆಯೂ ಹೌದು. 'ಕಂಪ್ಯೂಟರೆಂಬ ವಿಶ್ವದಲ್ಲಿ ನಮ್ಮೂರೇ ಕಳೆದುಹೋಯಿತು' ಎಂದು ಸಾಗರ- ಶಿರಸಿ ಬದಿಯವರು ಆತಂಕಕ್ಕೀಡಾಗಿದ್ದರೆ, ಈ ಒಪ್ಪಣ್ಣನ ಅಂಗಡಿಯಲ್ಲೊಂದು ನಿಟ್ಟುಸಿರು ಸಿಗುತ್ತದೆ.