

ನಿನ್ನೆ ಸಂಜೆ ಎಷ್ಟು ಹೇಳಿದರೂ ಕೇಳದೆ ಮಳೆಯೆಂದರೆ ನನಗಿಷ್ಟವೆಂದು ನೆನೆದುಬಿಟ್ಟೆ, ಕೋತಿ... ಆದರೀಗ ನೋಡು; ರಾತ್ರಿ ನಿನಗೆ ನೆಗಡಿಯಾಗಿದ್ದು, ಬೆಳಗ್ಗೆ ನನಗೆ ಜ್ವರ ಬಂದಿದೆ.
ಹುಡುಗಿಯ ಮುಡಿಯಲ್ಲಿ ಸಾಯುವೆನೆಂದು ಗೊತ್ತಿದ್ದರೂ ಸಹ ಹೂವು ಸಂಭ್ರಮಿಸಿತು, ಹುಡುಗನ ಖುಷಿಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು.
ಫುಟ್ಪಾತ್ನಲ್ಲಿ ಭಿಕ್ಷುಕನೊಬ್ಬ ಸತ್ತುಹೋದ. ಅನಾಥ ಶವವೆಂದು ಕಾರ್ಪೋರೇಷನ್ನವರು ಹೊತ್ತೊಯ್ದರು. ಅವನ ಸಾವಿಗೆ ಕಣ್ಣೀರಿಡಲು ಯಾರೂ ಇರಲಿಲ್ಲ. ಇದ್ದಕ್ಕಿದ್ದಂತೆ ಜೋರು ಮಳೆ ಶುರುವಾಯ್ತು.
ಭಿಕ್ಷುಕನೊಬ್ಬ ಬೀದಿಗಳನ್ನ ಸುತ್ತುತ್ತಾ ಹಸಿವಿನಿಂದ ನರಳುತ್ತಿದ್ದಾನೆ. ಆದರೆ ಯಾರೊಬ್ಬರ ಮನೆಯ ಬಾಗಿಲೂ ಮುಚ್ಚಿಲ್ಲ.
- ನವೀನ್ ಮಧುಗಿರಿ