ನಿನ್ನ ಮ್ಯಾಗ ಡಿಂಗ್-ಡಾಂಗ್ ಶುರು ಆಗೇತಿ
ಇದು ಫೇಸ್‌ಬುಕ್‌ನಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹರಿದಾಡುತ್ತಿರುವ ಉತ್ತರ ಕರ್ನಾಟಕ ಭಾಷೆಯ ಪ್ರೇಮಪತ್ರ. ಈ ಪತ್ರ ಬರೆದ ಅನಾಮಿಕ ಪ್ರೇಮಿಗೆ ಜಯವಾಗಲಿ ಎಂಬ ಸದಾಶಯದೊಂದಿಗೆ, ಈ ಪತ್ರವನ್ನು ಪ್ರಕಟಿಸಲಾಗಿದೆ...
ಪ್ರೀತಿಯ ಇಕಿನ,
ಏ ಇಕಿನ, ನೋಡವಾ ನೀ ಹೈಸ್ಕೂಲ್ ಸಾಲಿಗೆ ಯಾವತ್ತ ಕಾಲಿಟ್ಯೋ ಅವತ್ತಿಂದ ನಿನ್ನ ನೋಡಿದಾಗೊಮ್ಮೆ ನನ್ನ ಮೈ ಜುಮ್ ಅಂತತಿ. ನಿನ್ನ ದನಿ ಕೇಳಿದ್ರ ಅವನವ್ನ, ಅದ್ನೇ ಕೇಳಕೊಂತ ಇರಬೇಕ ಅನಸ್ತತಿ. ಇನ್ನ, ನೀ ನನ್ನ ಜೊತಿ ಮಾತಾಡುವಾಗಂತೂ ಎದಿ ಡವಾ ಡವಾ ಅಂತಿರತತಿ. ನಿ ನನ್ನ ಕಣ್ಣಾಗ ಕಣ್ಣಿಟ್ಟ ನೋಡ್ತಿಯಲ,್ಲ ಅದರ ಅರ್ಥ ಏನ..?
ನೀ ಹಂಗ ನೋಡಿದಾಗೊಮ್ಮೆ ನಾ ಕಕ್ಕಾ-ಬಿಕ್ಕಿ ಆಕನಿ ಗೊತ್ತನ...? ಏನರ ಆಗ್ಲಿವಾ, ನನಗಂತು ನಿನ್ನ ಮ್ಯಾಗ ಡಿಂಗ್-ಡಾಂಗ್ ಶುರು ಆಗೇತಿ. ನಿನಗೂ ನನ್ನ ಮ್ಯಾಗ ಡಿಂಗ್-ಡಾಂಗ್ ಇದ್ದರ ಇವತ್ತ ಚಂಜೀಮುಂದ ಸಾಲಿ ಗ್ರೌಂಡ್ ಹಂತೇಲೆ ಕಾಯ್ತಿರ್ತನಿ ಬಂದ ಹೇಳ..
ನಿಂಗೇನ್ ನನ್ನ ಮ್ಯಾಲೆ ಡಿಂಗ್-ಡಾಂಗ್ ಇಲ್ಲಾ ಅಂದ್ರೂ ಬಂದ ಹೇಳಿ, ಈ ಕಾಗದಾ ವಾಪಾಸ್ ಕೊಟ್ ಹೋಗು. ನಡಿತೇತಿ.. ನಾ ಗಟ್ಟಿ ಮನಸ ಮಾಡಿ ತಡಕೊಂತನಿ..
ನಾಚಾಕ ಹೋಗ್ಬ್ಯಾಡಾ..
=
ಇನ್ನೊಂದ ನೆನಪ ಇಟ್ಕೋವಾ..... ನೀ ಏನರ ಮಾಸ್ತರ್ ಮುಂದ್ ಹೇಳಿದೆ, ಇಲ್ಲಾ ನಿಮ್ಮಪ್ಪನ ಮುಂದ ಹೇಳಿದೆ ಮಾಡಿದೆಂದ್ರ ನನಗಂತೂ ಭಾಳ ಬ್ಯಾಸರ ಆಕ್ತತಿ. ಅಲ್ಲವಾ, ಬರ್ತಿಯೇನ ನಾಳಿಂದ ನೀ ಸಾಲಿಗೆ?
ಇಂತಿ ನಿನ್ನ,
= ಡಿಂಗ್-ಡಾಂಗ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ