ಹನಿ ಹನಿ

Updated on

ನಿಖರತೆಯ ತಳಹದಿಯ ಮೇಲೆ
ಅರಳಿದ ಬಟ್ಟಲ ಕಣ್ಣು ಕಂಡು
ಭಣಗುಡುವ ಖಾಲಿ ಕೊಡ
ಮುನಿಸಿಕೊಂಡಿದೆ ದಾರಿ ಕಾಣದೆ
----------------
ಬೆರಗಿನಿಂದ ಕಾಣುತ್ತಿರುವ ಬದುಕು
ಹೊಳೆಯುತ್ತಿದೆ ಬಾಗಿಲಿಗೆ ಸಿಕ್ಕಿಸಿದ
ತೋರಣಗಳಂತೆ
----
ಗಾರೆ ನೆಲದ ತೂತಿನಲ್ಲಿ
ಮೆತ್ತಿಕೊಂಡ ಮಣ್ಣನ್ನು
ದಿನಾ ಕೆದಕುತ್ತಾ ಕೂರುವ ಮಗು
ಗದರಿಸುವವರ ಎದುರು
ಸೆಟೆದು ನಿಂತಿದೆ ನಮಗೂ ಮಣ್ಣಿಗೂ
ಇರುವ ಋಣ ದೊಡ್ಡದೆಂದು!


- -ಕಾವೇರಿ ಎಸ್.ಎಸ್.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com