ಹನಿ ಹನಿ

Updated on

ನಿನ್ನೆ ಹೊಸದಾಗಿ ಕಂಡ ಸಂಬಂಧ
ಇಂದು ಹಳತಾಗಿ ಹಳಸಿದೆ;
ಅವನ ಮಾತಿನ ಸೆಕೆಗೆ.
=
ಅವನ ಕಣ್ಣಿನಲಿ ಅಡಗಿದ
ನನ್ನ ಪ್ರತಿಬಿಂಬವ ಕಂಡು
ಕನಸು ನಸುನಕ್ಕಿದೆ
ಅಂತರಂಗದ ಅನಾಮಿಕನೊಂದಿಗೆ
=
ಒಮ್ಮೆ ಹೇಳಿಬಿಡು
ನಿನ್ನ ಪ್ರೀತಿಯ ನಗುವಿನೊಂದಿಗೆ
ಮನಸ್ಸಿನ ಭಾರವು ಇಳಿಯುವುದು
=
ನಶೆಯ ಮಗ್ಗುಲಲ್ಲಿ ಲಾಲಿತ್ಯದ ಕಮಟು
ನಿರಂತರದ ಹಾದಿಯ ಸವೆಸುತ್ತಿದೆ
=
ಲಜ್ಜೆಯೊಂದಿಗೆ ಜೊತೆಗೂಡಿದ ಮನಸ್ಸು
ಕಾಯುವಿಕೆಯ ಜೊತೆಯಾಗಿದೆ
= ಕಾವೇರಿ ಎಸ್.ಎಸ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com