ಇಬ್ಬರು ಪ್ರೊಫೆಸರ್‌ಗಳು ಚರ್ಚೆಗೆ ಕುಳಿತಿದ್ದರು. ಅವರು ಮರೆಗುಳಿ ಪ್ರೊಫೆಸರ್‌ಗಳು ಎಂದು ಬಿಡಿಸಿ ಹೇಳಬೇಕಿಲ್ಲ ತಾನೆ? ಗಂಟೆ ಮಧ್ಯರಾತ್ರಿ 12 ದಾಟಿ ಚರ್ಚೆ ಮುಗಿಯುವ ಲಕ್ಷಣ ಕಾಣಿಸಲಿಲ್ಲ. ಇಬ್ಬರೂ ಅರ್ಥವತ್ತಾಗಿ ಆಕಳಿಸತೊಡಗಿದರು. ಸಮಯ ಮಧ್ಯರಾತ್ರಿ 1ನ್ನೂ ದಾಟಿದಾಗ ಒಬ್ಬ ಪ್ರೊಫೆಸರರು ಹೇಳಿದರು. 'ನಾಳೆ ಬೆಳಗ್ಗೆ 8 ಗಂಟೆಗೆ ನಾನು ಕಾಲೇಜಿಗೆ ಹೋಗಬೇಕಿದೆ. ಮೊದಲ ಪೀರಿಯಡ್ ನನ್ನದೇ ಅದಕ್ಕಾಗಿಯೇ ತುಸು ಬೇಸರದಿಂದಲೇ ಹೇಳುತ್ತಿದ್ದೇನೆ. ನೀವು ಈಗ ದಯವಿಟ್ಟು ಮನೆಗೆ ಹೋದರೆ ನನಗೆ ತುಂಬಾ ಅನುಕೂಲವಾಗುತ್ತದೆ...'
ಈ ಮಾತು ಕೇಳಿ ಬೆಕ್ಕಸಬೆರಗಾದ ಆ ಇನ್ನೊಬ್ಬ ಪ್ರೊಫೆಸರರು ನಡುವೆಯೇ ಬಾಯಿ ಹಾಕಿ 'ಎಲ ಎಲಾ, ನೀವೇ ನನ್ನ ಮನೆಗೆ ಬಂದಿದ್ದೀರಿ. ಇಲ್ಲಿಂದ ಎದ್ದು ಹೋಗಿ ಎಂದು ಹೇಳುವುದು ಹೇಗೆ ಎಂದು ಯೋಚಿಸುತ್ತಲೇ ಈವರೆಗೂ ಕುಳಿತಿದ್ದೆ. ಸರಿ, ನಾನಿನ್ನು ಹೊರಡುತ್ತೇನೆ' ಎನ್ನುತ್ತಾ ಎದ್ದು ಹೋಗಿಯೇ ಬಿಟ್ಟರು!!!.
Advertisement