ಹೃದಯದ ಹಾಯ್ಕಗಳು

Updated on: 

ನನ್ನ ನೋವುಗಳ
ಗೋಪುರದ ಮೇಲೆ ಮನೆಕಟ್ಟಿ
ಅವಳು
ನಗುತ್ತಿದ್ದಾಳೆ....

ತನ್ನ ನೋವುಗಳನ್ನೇ
ಮತ್ತೆ ಮತ್ತೆ ಹೇಳುತ್ತ;
ಅವಳು ನನ್ನೆದೆಗೆ
ಹೊಸ ನೋವು ಹೇರುತ್ತಿದ್ದಳು....

ಅವಳ
ನೋವಿಗೆ ಮುಲಾಮು ಹಚ್ಚಿದೆ;
ನನ್ನ ನೋವಿನ
ಗಾಯದ ಮೇಲೆ
ನೊಣಗಳು ಕುಣಿದಾಡುತ್ತಿದ್ದವು....

ಅವಳ
ನೋವನ್ನು ಕೊಂದೆ..
ವಾಸಿಯಾಯಿತೆಂದು ನಕ್ಕಳು;
ಅದು ನನ್ನೆದೆಯೊಳಗೆ
ಪುನರ್ಜನ್ಮ ಪಡೆಯಿತು...

ಅವಳು ನಗುತ್ತಿದ್ದಳು
ನಾನೂ ನಗುತ್ತಿದ್ದೆ
ನೋವು ಎದೆಯೊಳಗೆ
ಉರಿಯುತ್ತಿತ್ತು...

ಕುಂಟುತ್ತ ಅಲೆಯುತ್ತಿದೆ
ಮನಸ್ಸು ಅವಳ ಆಸರೆಯಿಲ್ಲದೇ;

ಅಲ್ಲಲ್ಲಿ ಬಿದ್ದ ಕನಸುಗಳನ್ನು
ಹುಡುಕುತ್ತಿದ್ದೇನೆ;
ಒಂದೂ ಸಿಗುತ್ತಿಲ್ಲ.....

ಅವಳಿಗೊಂದು ಸುಂದರ
ಕನಸು ಕೊಟ್ಟೆ;
ನಿರ್ದಾಕ್ಷಿಣ್ಯವಾಗಿ ಕೊಂದು ಬಿಟ್ಟಳು...
= ನಾಗರಾಜ್. ವೈ. ಕಾಂಬಳೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com