ಬಿಸಿಲು ಚಿತ್ರದ ನೆರಳು

ಗುಲ್ಬರ್ಗಾ ಎಂದರೆ 'ಬಿಸಿಲು' ಪದ ಮೆದುಳನ್ನೇರುತ್ತದೆ. ಅದೇ ಬಿಸಿಲು ಅಲ್ಲಿನ ಕಲಾಕಾರರ ಕುಂಚದ ತಂಪಿಗೂ...
ಬಿಸಿಲು ಚಿತ್ರದ ನೆರಳು
Updated on: 

ಗುಲ್ಬರ್ಗಾ ಎಂದರೆ 'ಬಿಸಿಲು' ಪದ ಮೆದುಳನ್ನೇರುತ್ತದೆ. ಅದೇ ಬಿಸಿಲು ಅಲ್ಲಿನ ಕಲಾಕಾರರ ಕುಂಚದ ತಂಪಿಗೂ ಕಾರಣವಾಗಿದೆ. ಅಲ್ಲಿನ ವಿ.ಬಿ. ಬಿರಾದರ ಅವರ 'ಬಿಸಿಲು' ಆರ್ಟ್ ಗ್ಯಾಲರಿಯನ್ನು ಹೊಕ್ಕರೆ ಜನಪದೀಯ ಲಾಲಿತ್ಯ ಮತ್ತು ಸೊಗಡು ಗೋಚರಿಸುತ್ತದೆ. ಒಂದು ರೀತಿಯ ಚಲನಾತ್ಮಕ ರಚನೆಯ ಕಲಾಕೃತಿಗಳವು. ಇಲ್ಲಿನ ಬಣ್ಣದ ರೇಖೆಗಳು, ಚಲನೆಯ ವಿವಿಧ ಭಂಗಿಗಳು, ಹಳ್ಳಿಯ ಬದುಕು, ಕಸುಬುಗಾರರ ಬದುಕು, ಲಂಬಾಣಿ ಹೆಂಗಳೆಯರು, ಕಲ್ಯಾಣದ ಶರಣರು, ಪಳೆಯುಳಿಕೆಯ ಲ್ಯಾಂಡ್‌ಸ್ಕೇಪ್ ಚಿತ್ರಗಳು- ಹೀಗೆ ಮುದ ನೀಡುವ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ತಮ್ಮ ಕೃತಿಗಳಲ್ಲಿ ಬಣ್ಣ ಬಳಸುವಿಕೆಯ ಕಸಬುಗಾರಿಕೆಗಿಂತ ಹೆಚ್ಚು ಕ್ರಿಯಾಶೀಲವಾಗಿ ತಮ್ಮ ಪೇಂಟಿಂಗ್‌ಗಳಿಗೆ ಜೀವ ತುಂಬಿದ್ದಾರೆ. ತಂದೆಯವರ ಪ್ರಭಾವವು ಇವರ ಮೇಲಾಗಿದೆ.
ಗುಲ್ಬರ್ಗಾ ಜಿಲ್ಲೆಯ ವೆಂಕಟಬೇನೂರಿನ ಇವರು ಕೆನ್‌ಕಲಾ ಶಾಲೆಯಲ್ಲಿ ಪದವಿ, ಗುಲ್ಬರ್ಗಾ ವಿ.ವಿ ಯಲ್ಲಿ ಫೈನ್ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿರಾದರ ಮೊ.9845634358) ಗುಲ್ಬರ್ಗಾದ ಎಸ್.ಬಿ. ಕಾಲೇಜಿನ ಉಪನ್ಯಾಸಕರು. ಗುಲ್ಬರ್ಗಾಕ್ಕೆ ಹೋದರೆ ಖಂಡಿತಾ 'ಬಿಸಿಲು' ಆರ್ಟ್ ಗ್ಯಾಲರಿಗೆ ಭೇಟಿ ನೀಡಿ.

-ಮಹಾದೇವ ಹಡಪದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com