ಹೃದಯಗಳ ಬಂಧನ

Updated on

'ಮುಖ ಮನಸ್ಸಿನ ಕನ್ನಡಿ ಅಂತಾರೆ' ಹಾಗೆಯೇ 'ಅಕ್ಷರಗಳು ಭಾವನೆಗಳ ಕನ್ನಡಿ'. ಖಂಡಿತವಾಗಿಯೂ ಹೃದಯದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ವ್ಯವಹರಿಸಿದಾಗ ಮಾತ್ರ ಅದು ನಿಜವಾದ ಭಾವನೆಗಳ ಅನಾವರಣ. ಯಾವುದೇ ಇಬ್ಬರು ವ್ಯಕ್ತಿಗಳು ಪರಸ್ಪರ ಕೈ ಬರಹದಲ್ಲಿ ಬರೆದುಕೊಳ್ಳುವ ಪತ್ರಗಳು ಅಳಿಸಲಾಗದ ನೆನಪಾಗಿ ಉಳಿಯುತ್ತವೆ. ಆದರೆ ಈಗಿನ ಫಾಸ್ಟ್ ಜಮಾನಾದಲ್ಲಿ ಕೈ ಬರಹದಲ್ಲಿ ಪತ್ರ ಬರೆಯುವಷ್ಟು ತಾಳ್ಮೆ, ಸಮಯ ಯಾರಿಗೂ ಇದ್ದಂತಿಲ್ಲ. ಆದರೆ ನಾನು ಇವತ್ತಿಗೂ ನನ್ನ ಆತ್ಮೀಯರಿಗೆ ಪತ್ರಗಳ ಮೂಲಕವೇ ಸಂಪರ್ಕಿಸುವುದು.ಟಿ
= ಶ್ವೇತಾ ವಿನಾಯಕ, ಧಾರವಾಡ

ಸಮಷ್ಟಿ ಪ್ರೇಮಕ್ಕಾಗಿ
ಪ್ರೀತಿ-ಪ್ರೇಮ ಅಂತೆಲ್ಲ ಹೇಳಿ ಫೋನ್ ಮತ್ತು ಇ-ಮೇಲ್‌ಗಳು ದುಬಾರಿ ಎನಿಸಿ ಕೈಬರಹದಲ್ಲೇ, ಹೃದಯದಲ್ಲಿ ಬಚ್ಚಿಟ್ಟ ಗುಟ್ಟುಗಳನ್ನೆಲ್ಲಾ ಬಿಚ್ಚಿಟ್ಟು ಪುಟಗಟ್ಟಲೆ ಬರೆದರೂ ತಗುಲುವುದು ಅತಿ ಕಡಿಮೆ ಖರ್ಚು. ಇದನರಿತು ಬರೆಯುತ್ತಿದ್ದು ಎಷ್ಟೆಷ್ಟೋ..! ಆದರೆ ಪ್ರೀತಿಯ ಹೆಸರಲ್ಲಿ ನಾಟಕವಾಡಿದ್ದು ಮನಗಂಡು ಬರವಣಿಗೆಗೇ ಬಿತ್ತು ಕುತ್ತು. ಫೋನ್ ಮತ್ತು ಇಮೇಲ್‌ಗಳು ಬಂದು ನಮ್ಮ ಕೈ ಬರಹದ ಸಂಸ್ಕೃತಿಗೆ ಬಂತು ಆಪತ್ತು. ನಾನೀಗ ಎಲ್ಲವ ಮರೆತು ಸಮಷ್ಟಿ ಪ್ರೇಮಕ್ಕಾಗಿ ಲೆಕ್ಕಣಿಗೆ ಹಿಡಿದೇ ಬರೆಯುತ್ತಿರುತ್ತೇನೆ. ಪತ್ರಿಕೆಗಳಿಗೆ, ಲೇಖಕರಿಗೆ, ಹಿತೈಷಿಗಳಿಗೆ ಅಷ್ಟು ಇಷ್ಟು....ಟಿ
= ಬೊಮ್ಮಣ್ಣ ಕಣಗಿಲ, ದಾವಣಗೆರೆ

ಬಿಡಲಾರದ ನಂಟು
ಕೈಬರಹದಲ್ಲಿ,
ಬರೆದವನ ವ್ಯಕ್ತಿತ್ವವಿದೆ
ಓದುಗನೊಡನೆ ಬಂಧುತ್ವವಿದೆ
ಅಕ್ಷರಕ್ಕೆ ಆದರವಿದೆ
ವಿಷಯಕ್ಕೆ ಗೌರವವಿದೆ
ಭಾವಗಳ ಬೆಸುಗೆಯಿದೆ
ಭಾವನೆಗಳ ಒಸಗೆಯಿದೆ
ಆದ್ದರಿಂದಲೇ ನನಗೆ
ಆರು ದಶಕಗಳಿಂದ
ಕೈಬರಹವು ಅಂಟಿದೆ
ಅದರೊಡನೆ, ಬಿಡಲಾರದ ನಂಟಿದೆ.ಟಿ
= ಎಚ್. ಆನಂದರಾಮ ಶಾಸ್ತ್ರಿ, ಬೆಂಗಳೂರು

ಫೋನ್ ಮತ್ತು ಈಮೇಲ್‌ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್:  anekaby2@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com