ಭಾವನೆಗಳ ರೂಪ

Updated on

ಈಗ ಬರವಣಿಗೆ ಕಣ್ಮರೆಯಾಗಿದೆ. ಇದಕ್ಕೆ ಕಾರಣಮೊಬೈಲ್ ಮತ್ತು ಎಸ್ಸೆಮ್ಮೆಸ್. ನಮ್ಮ ಭಾವನೆಗಳ ರೂಪವೇ ಈ ಬರವಣಿಗೆ. ಬರವಣಿಗೆಯಲ್ಲಿ ನಮ್ಮ ಮನಸ್ಸಿನ ನೋವು, ನಲಿವು, ಸಂತೋಷ, ದುಃಖ, ನಮ್ಮ ಉತ್ಸಾಹವನ್ನು ತೋರಿಸಿಕೊಳ್ಳಬಹುದು. ಬರವಣಿಗೆಯಿಂದ ಉಪಯೋಗವಿದೆ. ಕವನ, ಕಥೆ, ಲೇಖನಗಳು ಬರೆಯುವವರಿಗೆ ಈ ಬರವಣಿಗೆ ಪೂರಕವಾಗಿವೆ. ನಾನು ಶಿಕ್ಷಕಿಯಾಗಿರುವುದರಿಂದ ಮಕ್ಕಳಿಗೆ ಬರವಣಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಓದುವ ಆಸಕ್ತಿ ಯಾರಿಗಿರುತ್ತದೋ ಅವರಿಗೆ ಬರವಣಿಗೆಯ ಬಗ್ಗೆ ಕಾಳಜಿ ಇರುತ್ತದೆ.ಟಿ
= ಕೆ. ಸಿ. ಮೀನಾಕ್ಷಿ, ಹಾಸನ

ಬರೆಯುವವರ ಭಾವಲಹರಿ
ಇತ್ತೀಚಿಗೆ ಕೈ ಬರಹದಲ್ಲಿ ಪತ್ರ ಬರೆಯುವುದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಪತ್ರಿಕೆಗಳಿಗೆ ಪೋಸ್ಟ್ ಕಾರ್ಡ್ ಮೂಲಕ ಬರೆದು ಮುಖ್ಯ ವಿಷಯವನ್ನು ಕೆಂಪು ಅಡಿಗೆರೆ ಹಾಕಿ ಕಳಿಸುತ್ತಿದ್ದೆ. ಪತ್ರಿಕೆ ನನ್ನ ಬರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಮರೆಯಲಾರೆ. ಇ-ಮೇಲ್ ಯಾಂತ್ರಿಕ ಮತ್ತು ತಾಂತ್ರಿಕವಾದರೆ, ಅಂಚೆಯಣ್ಣ ಬಂದು ಕೂಗಿ ಕರೆದು ಮನೆ ಬಾಗಿಲಿಗೇ ಕೊಡುವ ಪತ್ರ ಮಾಂತ್ರಿಕವಾದುದು. ಮನೆಯಲ್ಲಿರುವ ಗಣ್ಯರು, ಪತ್ರಮಿತ್ರರ ಕೈಬರಹದ ಪತ್ರಗಳು ಕೈ ತಾಗಿದರೆ ಹಳೆಯ ಭಾವಕೋಶ ತೆರೆದು ಉಸಿರಾಡುತ್ತವೆ. ಕೈ ಬರಹ ಈಗಲೂ ಖುಷಿಕೊಡುವ ಸಂಗತಿ.ಟಿ               
= ಆರ್. ಎಸ್. ಸಂಕಪಾಳ, ಗಳತಗಾ

ನೆನಪೇ ಅವಿಸ್ಮರಣೀಯ!
ನಾನೊಬ್ಬ  ಹವ್ಯಾಸಿ ಪತ್ರಕರ್ತ, ಈಗಲು ನಾನು ಕೈಬರಹದ ಮೂಲಕ ಲೇಖನಗಳನ್ನು ಕಳುಹಿಸುತ್ತೇನೆ. ಕೈಬರಹಗಳು ಅಂದವಾಗಿದ್ದರೆ ಮಾತ್ರ ಮುತ್ತಿನಮಣಿಯಂತೆ ನೋಡಲು ಚೆಂದ. ನನ್ನ ಮಕ್ಕಳಿಗೆ ಅಂದವಾಗಿ ಬರೆಯಲು ಒತ್ತಾಯ ಮಾಡುತ್ತೇನೆ. ಮದುವೆಯ ಮುಂಚೆ ನನ್ನ ಪತ್ನಿ ಕೊಂಚವು ಜಾಗ ಬಿಡದೇ ವಿಸ್ತಾರವಾಗಿ ಪತ್ರ ಬರೆಯುತ್ತಿದ್ದಳು. ಆಗೆಲ್ಲಾ ಅಂಚೆಯಣ್ಣನ ಆಗಮನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆ ಪತ್ರಗಳನ್ನು ಓದುವಾಗ ಆಗುವ ಪರಿತೋಷದ ನೆನಪೇ ಅವಿಸ್ಮರಣೀಯ. ಮಾನವ ಸಂಬಂಧಗಳನ್ನು ಬೆಸೆಯುವ ಕೈ ಬರಹಗಳು ಕ್ಷೀಣಿಸುತ್ತಿರುವುದು ಶೋಚನೀಯ.ಟಿ
= ಪಿ. ವಿಜಯ್ ಗಂಗೊಳ್ಳಿ, ಕುಂದಾಪುರ

ಫೋನ್ ಮತ್ತು ಈಮೇಲ್‌ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com