
ಬೇಕಾಗುವ ಸಾಮಗ್ರಿಗಳು: = ಸಾಬುದಾನ 1 ಕಪ್ = ಹಾಲು 2 ಕಪ್ = ಬೆಲ್ಲ 1 ಕಪ್ = ಏಲಕ್ಕಿ ಅರ್ಧ ಚಮಚ = ಒಣದ್ರಾಕ್ಷಿ 10 = ಬಾದಾಮಿ 10 = ಗೋಡಂಬಿ 10 = ತುಪ್ಪ 1 ಚಮಚ = ಚಿಟಿಕೆಯಷ್ಟು ಕೇಸರಿ.
ಮಾಡುವ ವಿಧಾನ: ಚಿಕ್ಕಗಾತ್ರದ ಸಾಬುದಾನವನ್ನು 1-2 ಗಂಟೆ ನೀರಿನಲ್ಲಿ ನೆನೆ ಹಾಕಿ. ಹಾಲನ್ನು ಕುದಿಸಿ, ಇದೇ ಸಮಯದಲ್ಲಿ ಬೆಲ್ಲದ ಪಾಕ ರೆಡಿ ಮಾಡಿ, ಹಾಲು ಚೆನ್ನಾಗಿ ಕುದಿ ಬರುವಾಗ ಬೆಲ್ಲದ ಪಾಕ ಹಾಕಿ. ಈಗ ಸಾಬುದಾನ ಹಾಕಿ 10-15 ನಿಮಿಷ ಬೇಯಿಸಿ. ತುಪ್ಪವನ್ನು ಮತ್ತೊಂದು ಪ್ಯಾನ್‌ಗೆ ಹಾಕಿ ಅದರಲ್ಲಿ ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ ಹಾಕಿ 2 ನಿಮಿಷ ರೋಸ್ಟ್ ಮಾಡಿ, ಪಾಯಸಕ್ಕೆ ಹಾಕಿ, ಏಲಕ್ಕಿ ಪುಡಿ ಮತ್ತು ಕೇಸರಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ. ಸಾಬುದಾನ ಪಾಯಸ ರೆಡಿ.
Advertisement