
ಭಾವೋದ್ವೇಗಗಳು ಇಲ್ಲದೇ ಬದುಕುವುದರಲ್ಲಿ ಅರ್ಥ ವೇನಾದರೂ ಇದೆಯೇ? ಭಾವೋದ್ವೇಗಳಿಲ್ಲದಿದ್ದರೆ ನಮಗೆ, ಪ್ರಾಣಿಗಳಿಗೆ ವ್ಯತ್ಯಾಸವಿರುವುದಿಲ್ಲ. ಆದರೆ ಕೋಪ, ದು:ಖದಂತಹ ನೆಗೆಟಿವ್ ಎಮೋಷನ್ನುಗಳನ್ನು ಸಾನುಕೂಲ ಭಾವೋದ್ವೇಗಗಳಾಗಿ ಮಾರ್ಪ ಡಿಸಿಕೊಂಡರೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಕೋಟಿ ರುಪಾಯಿಗಳ ಲಾಟರಿ ಬಂದಿದೆಯೆಂದು ತಿಳಿದೊಡನೆ, ಪಕ್ಕದಲ್ಲಿರುವ ಅಪರಿಚಿತನಿಗಾದರೂ ಸರಿ, ಆ ವಿಷಯ ಹೇಳಿ ಹಸ್ತಲಾಘವ ಕೊಡಬೇಕೆನ್ನಿಸುತ್ತದೆ. ಕೆಲವರಂತೂ ಆ ಉದ್ವೇಗದಲ್ಲಿ ಆಲಿಂಗಿಸಿಕೊಳ್ಳಬಹುದು. ಕೆನ್ನೆಯ ಮೇಲೆ ಮುತ್ತಿಕ್ಕಬಹುದು. ಅದೇ ರೀತಿಯಲ್ಲಿ, ಆತ್ಮೀಯರು ಸಾವಿಗೀಡಾದಾಗ ದು:ಖವೂ, ಸಾಂತ್ವನವೂ ಸಹಜ. ಇದು ಸಾನುಕೂಲ ಭಾವೋದ್ವೇಗದ ಹಂಚುವಿಕೆ.
ಎಮೋಷನ್ ರಮ್ಯವಾದದ್ದಿರಬಹುದು. ಇಲ್ಲವೇ ಕಳವಳಗೊಳಿಸುವುದಿರಬಹುದು. ಉಲ್ಲಾಸಭರಿತವಾಗಿದ್ದಿರಬಹುದು. ಇಲ್ಲವೇ ದು:ಖಮಯವಾಗಿರಬಹುದು. ಪ್ರಾಣಿಗಳಿಗೆ ಕೇವಲ ಭಯ, ಕೋಪದಂತಹ ಎರಡು ಮೂರು ಉದ್ವೇಗಗಳು ಮಾತ್ರವೇ ಇರುತ್ತವೆ. ಮನುಷ್ಯನಿಗೆ ಆನಂದ, ಈಷ್ಯರ್ೆ, ಅಸೂಯೆ, ನಾಚಿಕೆ, ಕಿರಿಕಿರಿ, ಅಭದ್ರತಾಭಾವ, ನಿಸ್ಸಹಾಯಕತೆ, ದು:ಖದಂತಹ ಕೆಲವು ನೂರು ಭಾವೋದ್ವೇಗಗಳಿವೆ.
'ಎಷ್ಟು ದೊಡ್ಡ ತಪ್ಪು ನಡೆದರೂ ನಾನು ಆವೇಶಕ್ಕೆ ಗುರಿಯಾಗುವುದೇ ಇಲ್ಲ' ಎಂದುಕೊ ಳ್ಳುವುದೂ ತಪ್ಪೇ. ಒಂದೊಂದು ಸಲ ಕೋಪವನ್ನು ಪ್ರದಶರ್ಿಸದಿದ್ದರೆ ಕೆಲಸಗಳಾಗುವುದಿಲ್ಲ. ಇತರರು ನಮ್ಮನ್ನು ಅಸಮರ್ಥರೆ ನ್ನುವ ಅಪಾಯವಿದೆ. ಭಾವೋದ್ವೇಗವಿಲ್ಲದಿದ್ದರೆ ಅನಂದವೇ ಇಲ್ಲ. ಪಾಜ್ಹಿಟಿವ್, ನೆಗೆಟಿವ್, ಉದ್ವೇಗರಹಿತ ಇವು ಮೂರು ವಿಧಗಳು.
ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ. ಕೊನೆಯ ಆರು ಚೆಂಡುಗಳಲ್ಲಿ ಎದುರು ಟೀಮ್ನವರು 30 ರನ್ ಹೊಡೆಯಬೇಕು. ನಮ್ಮವರು ಗೆದ್ದುಬಿಟ್ಟರೆಂಬ ಧಿಮಾಕಿನಿಂದ ಜನರು ಗಲಭೆ ಮಾಡುತ್ತಿದ್ದಾರೆ. ಮೊದಲ ಚೆಂಡನ್ನು ಬ್ಯಾಟ್ಸ್ಮನ್ ಬೌಂಡರಿ ದಾಟಿಸಿ ಸಿಕ್ಸರ್ ಹೊಡೆದ. ಎರಡನೆಯದು ಬೌಂಡರಿ. ಮೂರನೆಯದು ಮತ್ತೆ ಆರು. ಸ್ಟೇಡಿಯಮ್ ನಿಶ್ಶಬ್ದವಾಗಿ ಹೋಯಿತು. ಕೊನೆಯ ಚೆಂಡು. ಐದು ಹೊಡೆಯಬೇಕು. ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ. ಆ ಚೆಂಡು ಸ್ಟೇಡಿಯಂ ದಾಟಿ ಬಿದ್ದಿತು. ಜನರು 'ಛೀ' ಎಂದರು. ಬೌಲರನ್ನು ಬೈಯದಿರುವವನೇ ಇಲ್ಲ.
ಬ್ಯಾಟಿಂಗ್ ಮಾಡುವುದು ನಮ್ಮ ಟೀಮ್ ಆಗಿದ್ದಿದ್ದರೆ? ಪಾತ್ರಗಳು ತಾರುಮಾರಾದರೆ, ಬ್ಯಾಟ್ಸ್ಮನ್ಗೆ ಬೌಲರ್ ಓಟಗಳನ್ನು ದಕ್ಷಿಣೆಯಾಗಿ ಸಮಪರ್ಿಸಿದ್ದಿದ್ದರೆ? ಆಗ ನಾವು ಹೇಗೆ ಎಂಜಾಯ್ ಮಾಡಿರುತ್ತಿದ್ದೆವೋ ಊಹಿಸಿಕೊಂಡರೆ ನಮ್ಮ ಆಲೋಚನೆಗಳಲ್ಲಿ ಇರುವ ಲೋಪ ಅರ್ಥ ಆಗುತ್ತದೆ. ಇದು ಮನುಷ್ಯರಲ್ಲಿನ ಬಲಹೀನತೆ.
ಆದರೆ, ಅದೊಂದು ಆಟ. ಅದನ್ನು ಹಾಗೆಯೇ ಉದ್ವೇಗದಿಂದ, ಆವೇಶದಿಂದ ಎಂಜಾಯ್ ಮಾಡಬೇಕು. ಇಲ್ಲದಿದ್ದರೆ ಥ್ರಿಲ್ ಇರುವುದಿಲ್ಲ. ಅದು ಪಾಸಿಟಿವ್ ಎಮೋಷನ್. ನಮ್ಮವರು ಗೆದ್ದರೂ, ಇತರರು ಗೆದ್ದರೂ ಒಂದೇ ರೀತಿ ಸ್ಪಂದಿಸುವವನು ನಾಯಕನನ್ನೂ, ಹಾಸ್ಯನಟನನ್ನೂ ಒಂದೇ ರೀತಿ ನೋಡಬಲ್ಲ ಮಹಾವೇದಾಂತಿ ಆಗಿರುತ್ತಾನೆ.
ಉದ್ವೇಗ ರಾಹಿತ್ಯ
ಒಬ್ಬ ಮಹಿಳೆ ವಿವಾಹ ವಿಚ್ಛೇದನಕ್ಕೆ ವಿನಂತಿಸಿಕೊಳ್ಳುತ್ತಾಳೆ. ಜಡ್ಜ್ ಕಾರಣ ಕೇಳಿದಾಗ, 'ನನ್ನ ಪತಿ ಯಾವಾಗಲೂ ಕೋಪಿಸಿಕೊಳ್ಳುವುದಿಲ್ಲ. ನನ್ನನ್ನು ಸಮಾಧಾನ ಮಾಡಲು ಪ್ರಯತ್ನ ಮಾಡುವುದಿಲ್ಲ. ಸನಿಹಕ್ಕೆ ಕರೆದುಕೊಂಡು ಸಾಂತ್ವನ ನೀಡೋಣವೆಂದರೆ ಬಾಧೆ ಪಡುವುದಿಲ್ಲ. ನಾನು ಬೇಡಿಕೊಳ್ಳಲು ಅವಕಾಶ ನೀಡುವುದಿಲ್ಲ. ನನ್ನ ತಪ್ಪು ತಿಳಿದುಕೊಳ್ಳಬೇಕೆಂದುಕೊಳ್ಳುತ್ತೇನೆ. ಆದರೆ ಆತ ಎಂದಿಗೂ ನನ್ನ ಮೇಲೆ ಕಿರಿಕಿರಿಗೊಳ್ಳುವುದಿಲ್ಲ. ನಾನು ಜೋಕ್ ಮಾಡಿದರೆ ನಗುವುದಿಲ್ಲ. ನನ್ನೊಂದಿಗೆ ಆನಂದ ಹಂಚಿಕೊಳ್ಳುವುದಿಲ್ಲ. ನನ್ನನ್ನು ಹೊಡೆಯುವುದಿಲ್ಲ, ಬೈಯುವುದಿಲ್ಲ' ಎಂದು ಹೇಳಿದಳು. ಜಡ್ಜ್ ಅವಳಿಗೆ ತಕ್ಷಣವೇ ವಿಚ್ಛೇದನ ಮಂಜೂರು ಮಾಡಿದ.
ಮೆದುಳಿನಲ್ಲಿನ ಅಮಿಗ್ಡಾಲೆ, ತಾಲ್ಮಸ್ಗಳು ನಮ್ಮ ಭಾವೋದ್ವೇಗಗಳನ್ನು ನಿಯಂತ್ರಿಸುತ್ತವೆ (ಇದು ಸೈಂಟಿಫಿಕ್ ವಿವರಣೆ ಅಲ್ಲ. ಕೇವಲ ಓದುಗರಿಗೆ ಅರ್ಥವಾಗಲೆಂದು ಮಾತ್ರವೇ). ಅಮಿಗ್ಡಾಲೆ ಪ್ರಭಾವ ಇರುವ ವ್ಯಕ್ತಿ ವಿಪರೀತವಾದ ಎಮೋಷನ್ಸ್ ಪ್ರದಶರ್ಿಸುತ್ತಾ ಇರುತ್ತಾನೆ. ತಾಲ್ಮಸ್ ವ್ಯಕ್ತಿಗಳು ಉದ್ವೇಗರಹಿತವಾಗಿ ಇರುತ್ತಾರೆ.
ಅಮಿಗ್ಡಾಲೆ ಪ್ರಭಾವ ಹೆಚ್ಚಾಗಿ ಇರುವ ವ್ಯಕ್ತಿಗಳು ಏನು ಬಂದರೂ ತಡೆದುಕೊಳ್ಳು ವುದಿಲ್ಲ. ಆವೇಶದಿಂದಾಗಿ ಇತರರೊಂದಿಗಿನ ಸಂಬಂಧವನ್ನು ಹಾಳು ಮಾಡಿಕೊಳ್ಳುತ್ತಾರೆ. ಮತ್ತೊಂದೆಡೆ ತಾಲ್ಮಸ್ ಪ್ರಭಾವ ಹೆಚ್ಚಾಗಿರುವ ವ್ಯಕ್ತಿಗಳು ಸದಾ ನಿಲರ್ಿಪ್ತತೆಯಿಂದ ಇರುತ್ತಾ, ಅದೇ ಮೆಚ್ಯೂರಿಟಿ ಎಂದುಕೊಂಡು ಸುತ್ತಲೂ ಇರುವ ಸೌಂದರ್ಯವನ್ನು, ಆತ್ಮೀಯರನ್ನು ಕಳೆದುಕೊಳ್ಳುತ್ತಾರೆ. ಇವರು ಗಟ್ಟಿಯಾಗಿ ನಗುವುದು ಕೂಡ ಬಹಳ ವಿರಳ.
ಅಮಿಗ್ಡಾಲೆ ವ್ಯಕ್ತಿಗಳು ಹತ್ತಿರದವರನ್ನು, 'ಕಂದಾ- ಮುನ್ನಾ - ನನ್ನ ಚಿನ್ನಾ' ಎಂದು ಸಂಬೋಧಿಸುತ್ತಿರುತ್ತಾರೆ. ತಾಲ್ಮಸ್ನವರು 'ಛೇ... ಕಣ್ಣೂ, ಮೂಗು, ಚಿನ್ನ, ಬಂಗಾರ, ಬೆಳ್ಳಿ - ಏನಿದು ನಾನ್ಸೆನ್ಸ್' ಎನ್ನುತ್ತಾರೆ. ಆವೇಶದಿಂದ ಬೈದು, ಆ ನಂತರ ಮಡಿಲಲ್ಲಿ ತಲೆ ಇಟ್ಟುಕೊಂಡು ಅಳುವ ಅಮಿಗ್ಡಾಲೇ ವ್ಯಕ್ತಿಗಳನ್ನೇ ಹೆಣ್ಣುಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ.
ಹುಣ್ಣಿಮೆಯ ದಿನ ಬೆಳದಿಂಗಳಲ್ಲಿ ಬಿಳಿಯ ಸೀರೆ ಉಟ್ಟುಕೊಂಡು, ಮುಡಿಯಲ್ಲಿ ಮಲ್ಲಿಗೆ ಹೂವು ಮುಡಿದು, ಕುತ್ತಿಗೆಯಲ್ಲಿ ಬೆಳ್ಳಗಿನ ಮುತ್ತಿನ ಸರ ಧರಿಸಿ ಹೆಂಡತಿ ಎದುರಿಗೆ ಬಂದರೆ, ಉದ್ವೇಗದ ಪಾರವಶ್ಯದಲ್ಲಿ ಮೊಣಕಾಲ್ಗಳ ಮೇಲೆ ಕುಳಿತು, ಎರಡೂ ಕೈಗಳನ್ನು ಚಾಚಿ, 'ಓ ದೇವೀ! ನೀನು ಸೌಂದರ್ಯಕ್ಕೇ ಪ್ರತಿರೂಪ!' ಎಂದು ಉದ್ವೇಗದಿಂದ ಅಲುಗಾಡುತ್ತಿದ್ದಾನೆ ಅಮಿಗ್ಡಾಲೆ ಪ್ರಭಾವಿತ ಪತಿ. ಮರುದಿನ ಅವಳು ಸಾಂಬಾರಿನಲ್ಲಿ ಉಪ್ಪು ಹಾಕುವುದನ್ನು ಮರೆತರೆ ಕೆನ್ನೆಯ ಮೇಲೆ ಫಟೀರನೆ ಬಾರಿಸುತ್ತಾನೆ. ಮತ್ತೊಂದೆಡೆ ತಾಲ್ಮಸ್ನಿಂದ ಪ್ರಭಾವಿತರಾದ ವ್ಯಕ್ತಿಗಳು ಇದಕ್ಕೆ ವಿರುದ್ಧವಾಗಿ ವತರ್ಿಸುತ್ತಾರೆ. ಬಿಳಿಯ ಸೀರೆ ಉಟ್ಟು, ಮಲ್ಲಿಗೆ ಮುಡಿದು ಬಂದ ಹೆಂಡತಿಯೊಂದಿಗೆ, 'ಸೀರೆ ಅಶಾಶ್ವತ, ಹೂಗಳು ಕ್ಷಣಿಕ. ಹೂಂ.. ಜೀವನವೇ ತಾತ್ಕಾಲಿಕ' ಎನ್ನುತ್ತಾನೆ. ಮರುದಿನ ಬೆ ಗ್ಗೆ ಅವಳು ಉಪ್ಪು ಹಾಕುವುದನ್ನು ಮರೆತರೆ, 'ನಾವು ಬದುಕಲು ತಿನ್ನುತ್ತೇವೆ. ತಿನ್ನುವುಕ್ಕಾಗಿ ಬದುಕುವುದಿಲ್ಲ. ಜೀವನಕ್ಕೆ ಉಪ್ಪು ಅಷ್ಟೊಂದು ಮುಖ್ಯವಲ್ಲ' ಎಂದು ನಿಭರ್ಾವುಕನಾಗಿ ಹೇಳುತ್ತಾನೆ.
ಅಪಘಾತ ನಡೆದ ಸ್ಥಳದಲ್ಲಿ, ಸುತ್ತಲೂ ಇರುವ ಜನರ ಬಗ್ಗೆ, ಮೀಡಿಯಾ ಕ್ಯಾಮೆರಾಗಳ ಬಗ್ಗೆ ಚಿಂತಿಸದೇ ಶವದ ಪಕ್ಕದಲ್ಲಿಯೇ ಕುಳಿತು, ಎದೆ ಬಡಿದುಕೊಂಡು ಒಬ್ಬ ಮಹಿಳೆ ಅಳುತ್ತಿದ್ದಾಳೆ. ಇದು ಉದ್ವೇಗ (ಣಟಿಛಿಠಟಿಣಡಿಠಟಟಜಜ ಜಟಠಣಠಟಿ). ಸೆಂಟಿಮೆಂಟಲ್ ಸಿನಿಮಾ ನೋಡುತ್ತಿದ್ದಾಗ ಕೆನ್ನೆಗಳ ಮೇಲೆ ಧಾರಾಕಾರವಾಗಿ ಹರಿಯುವ ಕಣ್ಣೀ ರನ್ನು ಇಂಟವರ್ೆಲ್ನಲ್ಲಿ ದೀಪಗಳು ಬೆಳಗಿದೊಡನೆ ಯಾರೂ ನೋಡದಂತೆ ಗೌರವಪೂರ್ವಕವಾಗಿ ಒರೆಸಿಕೊಂಡು ಬಿಡುತ್ತೇವೆ(ಛಿತಟಜಜ ಛಿಠಟಿಣಡಿಠಟ). 'ಮೂಢರಂತೆ ಅಳುವುದಕ್ಕೇ ಎಲ್ಲರೂ ಈ ಕಣ್ಣೀರಿನ ಸಿನಿಮಾವನ್ನು ನೋಡಲು ಬಂದೆವಾ' ಎಂದು ನಾವು ಅಂದುಕೊಳ್ಳುವುದಿಲ್ಲ. ಇದು ನಿಯಂತ್ರಣ.
ಯಾವಾಗ ಭಾವೋದ್ವೇಗಕ್ಕೆ ಒಳಗಾಗಬೇಕು? ಎಲ್ಲಿ ಸಕಾರಣವಾಗಿ ಆಲೋಚಿಸಬೇಕು? ಉತ್ತರ ಬಹಳ ಚಿಕ್ಕದು. ಕೋಪ, ದು:ಖ, ಭಯದಂತಹ ನೆಗೆಟಿವ್ ಎಮೋಷನ್ಗಳನ್ನು ನಿಯಂತ್ರಿಸಿ ಕೊಳ್ಳಬೇಕಾಗಿ ಬಂದಾಗ ತಾಲ್ಮಸ್ ಬಳಸಬೇಕು. ಆನಂದ, ಉಲ್ಲಾಸ, ಪ್ರೇಮ ಮೊದಲಾದ ವಿಷಯಗಳಲ್ಲಿ ಅಮಿಗ್ಡಾಲೆಯ ಆಸರೆ ತೆಗೆದುಕೊಳ್ಳಬೇಕು. ಮಾನವ ಸಂಬಂಧಗಳಿಗೆ, ಮನಸ್ಸು ನಿರಂತರವಾಗಿ ಆಹ್ಲಾದಕರವಾಗಿ ಇರಲು ಇದೇ ಒಳ್ಳೆಯ ಮಾರ್ಗ.
ಯಾವಾಗ ಅಳಬೇಕು? ಏಕೆ ಭಯಪಡಬೇಕು? ಯಾವುದನ್ನು ಅನುಮಾನಿಸಬೇಕು?
ನಿಜಕ್ಕೂ ಅಳುವಿಗೆ ಅರ್ಥವೇನು? ಕಣ್ಗಳಿಂದ ನೀರು ಬರುವುದೇ ಅಳು ಎನ್ನುವುದಾದರೆ, ನಾವು ನಿರಂತರ ಅಳುತ್ತಲೇ ಇರಬೇಕಂತೆ. ಕಣ್ಗಳನ್ನು ಶುದ್ಧ ಮಾಡುತ್ತಾ ಇರಲು 'ಟಿಯರ್ ಗ್ಲಾಂಡ್ಸ್' ನೀರನ್ನು ಸದಾ ಸ್ರವಿಸುತ್ತಲೇ ಇರುತ್ತವಂತೆ. ಆ ನೀರಿನ ಬಿಂದುಗಳು ಕಣ್ಣುಗಳ ಅಂಚಿನಿಂದ ಮೂಗಿನೊಳಕ್ಕೆ ಇಂಗಿಹೋಗುವುದಂತೆ. ಇಲ್ಲವೇ ಆವಿಯಾಗಿಬಿಡುವುದಂತೆ. ಎಮೋಷನ್ ಹೆಚ್ಚಾದಾಗ ಈ ಗ್ಲಾಂಡ್ಸ್ ಮತ್ತಷ್ಟು ಹೆಚ್ಚಾಗಿ ಸ್ರವಿಸುವುದರಿಂದ, ಇಂಗಲು ಜಾಗವಿಲ್ಲದೇ ನೀರು ಕೆನ್ನೆಗಳ ಮೇಲೆ ಜಾರುತ್ತವಂತೆ. ಇದು ಅಳುವಿನ ರಹಸ್ಯ.
'ಸಿನಿಮಾದ ಅಂತ್ಯಕ್ಕೆ ಮೊದಲು, ಹೀರೋ ತನ್ನ ಕುಟುಂಬ ಸದಸ್ಯರೆ ಲ್ಲರನ್ನೂ ಭೇಟಿಯಾದಾಗ ಪ್ರೇಕ್ಷಕರಿಗೆ ಏಕೆ ಆನಂದಭಾಷ್ಪಗಳು ಬರು ತ್ತವೆ? ಸಂತೋಷದಿಂದ ಏಕೆ ಕಣ್ಣೀರನ್ನು ಒರೆಸಿಕೊಳ್ಳುತ್ತಾರೆ?' ಎನ್ನುವ ಪ್ರಶ್ನೆಗೆ ಸೈಕಾಲಜಿಸ್ಟುಗಳು ನೀಡುವ ವಿವರಣೆ ಗಮ್ಮತ್ತಾಗಿಯೂ, ಆಲೋ ಚನಾತ್ಮಕವಾಗಿಯೂ ಇರುತ್ತದೆ. ಮನುಷ್ಯನಿಗೆ ಆನಂದ ಭಾಷ್ಪವೆನ್ನುವುದೇ ಇಲ್ಲವಂತೆ. ಜನರಿಗೆ ಬರುವುದು ಮಾಮೂಲೀ ಕಣ್ಣೀರೇ ಅಂತೆ. ದೈನಂದಿನ ಜೀವನದಲ್ಲಿ ನಾವು ಬಹಳ ಸಲ ದು:ಖಿಸಬೇಕೆಂದುಕೊಳ್ಳುವೆವಂತೆ! ಆದರೆ ವಯಸ್ಸು, ಸಂಸ್ಕಾರ, ಗೌರವ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು
ಆ ದು:ಖಾಶ್ರುವನ್ನು ತಡೆದುಕೊಳ್ಳುವೆವಂತೆ. ಹಾಗೆ ತಡೆದುಕೊಳ್ಳಲು ಉಪಯೋಗವಾಗುವ ಎನಜರ್ಿ, ಯಾವುದಾ ದರೂ ಆನಂದಕರವಾದ ದೃಶ್ಯಗಳನ್ನು ನೋಡಿದಾಗ ಒಮ್ಮೆಲೇ ಕಣ್ಣೀರಿ ನಂತೆ ಬಿಡುಗಡೆ ಮಾಡುತ್ತ ದಂತೆ. ಅದಕ್ಕೇ ಸಿನಿಮಾದಲ್ಲಿನ ದೃಶ್ಯಗಳನ್ನು ನೋಡಿ ಚಿಕ್ಕಮಕ್ಕಳು ಸಂತೋಷದಿಂದ ಕಣ್ಣು ಒರೆಸಿಕೊಳ್ಳುತ್ತಾರಂತೆ. ವಿಷಾದಕ್ಕೆ ಪ್ರತಿಸ್ಪಂದಿಸುವುದಿಲ್ಲವಂತೆ. ಬಹಳ ಒಳ್ಳೆಯ ತರ್ಕ ಇದು. ದೇವದಾಸ್ ಸಿನಿಮಾ ನೋಡಿ ಯಾವ ಚಿಕ್ಕ ಹುಡುಗ/ಹುಡುಗಿ ಅಳುವುದನ್ನು ನೀವು ಗಮನಿಸಿದ್ದೀರಾ? ಈ ಸ್ಪಂದನವನ್ನು ಇ.ಕ್ಯೂ. ಎನ್ನುತ್ತಾರೆ.
(ಮುಂದುವರಿಯುವುದು)
Advertisement