ಕೈ ಬರಹವನ್ನು ಓದುವಾಗ ಆಗುವ ಆನಂದ ಕಂಪ್ಯೂಟರ್, ಮೊಬೈಲ್ನಲ್ಲಿ ಓದುವಾಗ ಸಿಗೋಲ್ಲ. ನನ್ನ ಅಜ್ಜ ಸೈನಿಕ. ಅವರೊಂದಿಗೆ ನಾನು ಪತ್ರ ವ್ಯವಹಾರವನ್ನೇ ಮಾಡ್ತೀನಿ. ಪತ್ರವನ್ನು ಕಾಯುವ ಮನಸ್ಸು ಈಗಿನ ತಂತ್ರಜ್ಞಾನ ಯುಗದಲ್ಲಿ ಕಳೆಗುಂದಿಸಿ ಬಿಟ್ಟಿದೆ. ಮನಸ್ಸಿನ ಮಾತು ಲೇಖನಿಗಿಳಿಸುವ ಹಾಗೆ ಕಂಪ್ಯೂಟರ್ ಮುಂದೆ ಆಗುವುದಿಲ್ಲ. ಬರಹದ ನೆನಪು, ಅದರ ಖುಷಿ ಅನೇಕ ಕಾಲದವರೆಗೂ ಮಾಸಲ್ಲ. ಓಲೆ ಕಳಿಸುವ ಸಂಸ್ಕೃತಿ ಹಿಂದಿನದಾದರೂ ಎಂದೆಂದಿಗೂ ಅದು ಹೊಸತೆನಿಸುವಂತಿರುತ್ತದೆ.ಟಿ
-ಪ್ರೇಮಾ, ಬೀಡಿನಗುಡ್ಡೆ, ಉಡುಪಿ
ಕೈ ಬರಹವೇ ಮೇಲು!
ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ನಮ್ಮ ಸುಂದರ ಕೈಬರಹ ಪ್ರಮುಖ ಪಾತ್ರ ವಹಿಸುತ್ತದೆ. ಮುದ್ದಾದ ಅಕ್ಷರಗಳಿಂದ ನಾವು ಬರೆಯುವ ಹೋಂ ವರ್ಕ್, ಪತ್ರ ಲೇಖನ, ಕಥೆ, ಕವನಗಳನ್ನು ನೋಡುವ ನಮ್ಮ ಶಿಕ್ಷಕರು ನಮ್ಮನ್ನು ಹೊಗಳಿದಾಗ ಆಗುವ ಆನಂದವನ್ನು ಬಣ್ಣಿಸಲು ಸಾಧ್ಯವೇ? ಎಷ್ಟೇ ಎಚ್ಚರಿಕೆ ವಹಿಸಿದರೂ ಟೈಪ್ ಮಾಡುವಾಗ ನಮಗೇ ಗೊತ್ತಿಲ್ಲದಂತೆ ತಪ್ಪು ಅಕ್ಷರಗಳು ನುಸುಳುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಇ-ಮೇಲ್ಗಿಂತ ನಮ್ಮ ಕೈ ಬರಹವೇ ಮೇಲು!ಟಿ
-ನಾಗವೈಷ್ಣವಿ ಎಂ. ಹಾಸನ
ಭಾವನೆಗಳ ಮೂಟೆ
ಇವತ್ತಿನ ಇಂಟರ್ನೆಟ್ ಯುಗದಲ್ಲಿ ಪತ್ರ ವ್ಯವಹಾರವನ್ನು ಎಲ್ಲರೂ ಮರೆತಿದ್ದಾರೆ. ನಮ್ಮ ಬಾಲ್ಯದ ದಿನಗಳಲ್ಲಿ ಸಂಬಂಧಿಗಳಿಗೆ ಪತ್ರ ಬರೆದು ಉತ್ತರಕ್ಕಾಗಿ ಅಂಚೆಯಣ್ಣನ ದಾರಿ ಕಾಯುತ್ತಿದ್ದೆವು. ನಮ್ಮ ಮನೆ ಕಡೆ ಅಂಚೆಯಣ್ಣ ಬರುತ್ತಿದ್ದಾನೆಂದರೆ ಅದೇನೋ ಸಡಗರ. ಯಾವುದೇ ಪತ್ರ ಕೊಟ್ಟರೂ ಸರಿ, ಅದನ್ನು ಓದಿ ಮುಗಿಸುವವರೆಗೆ ಸಮಾಧಾನವೇ ಆಗುತ್ತಿರಲಿಲ್ಲ. ಕೈಗೆ ಸೇರಿದ ಪತ್ರ ಓದಿದಾಗ ನಮ್ಮ ದೂರದ ಸಂಬಂಧಿಗಳು ನಮ್ಮೊಂದಿಗೆ ಮಾತನಾಡುತ್ತಿದ್ದಾರೇನೋ ಎಂಬ ಭಾವನೆ ಮೂಡುತ್ತಲಿತ್ತು. ಶಾಶ್ವತವಾಗಿ ನಮ್ಮ ಜೀವನದುದ್ದಕ್ಕೂ ದಾಖಲೆಗಳಾಗಿ ಉಳಿಯುವ ಪತ್ರಗಳಿಗೆ ಸರಿಸಾಟಿ ಪತ್ರಗಳೇ!ಟಿ
-ಸಂಜಯ ಸಿ ಕುಲಿಗೋಡ, ಮುಗಳಖೋಡ
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Advertisement