ನಮ್ಮ ಉಗುರುಗಳು ಪೋಷಕಾಂಶ ಕೊರತೆ, ಇನ್ಫೆಕ್ಷನ್ ಮತ್ತು ಗಂಭೀರ ಕಾಯಿಲೆಗಳನ್ನು ಸೂಚಿಸುತ್ತವೆ ಎಂಬುದು ನಿಮಗೆ ಗೊತ್ತೆ?
ಥೈರಾಯ್ಡ್ ಕಾಯಿಲೆಯನ್ನು ಉಗುರಿನಲ್ಲಾಗುವ ಬದಲಾವಣೆಗಳೇ ಹೇಳುತ್ತವಂತೆ.
= ಉಗುರುಗಳೇನಾದರೂ ಕೆಳಗಿನ ಹೊದಿಕೆಯಿಂದ ಎದ್ದು ನಿಂತಂತೆ ಬೆಳೆಯಲಾರಂಭಿಸಿದರೆ ಕೆಳಗಿನ ಜಾಗದಲ್ಲಿ ಕೊಳೆಕಸ ಕುಳಿತು ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಇನ್ಫೆಕ್ಷನ್ಗಳನ್ನು ಆಹ್ವಾನಿಸುತ್ತವೆ.
ಉಗುರುಗಳ ಮೇಲೆ ಕೆಂಪು ಗೆರೆಯಂಥ ಲಕ್ಷಣಗಳು ಕಂಡುಬಂದರೆ ಹೃದಯ ಸಂಬಂಧಿ ತೊಂದರೆಗಳನ್ನು ಸೂಚಿಸುತ್ತಿರಬಹುದು.
ಅತಿಯಾಗಿ ಉಗುರು ಕಚ್ಚುತ್ತಿರುವುದು ಮಾನಸಿಕ ತೊಂದರೆಯಿಂದ(ಚಿಂತೆ, ಟೆನ್ಷನ್, ತಪ್ಪಿತಸ್ಥ ಭಾವನೆ) ಬಳಲುತ್ತಿರುವುದನ್ನು ತೋರಿಸುತ್ತಿರುತ್ತದೆ.
ಇಂಥ ಬದಲಾವಣೆ ಏನಾದರೂ ನಿಮ್ಮ ಉಗುರುಗಳಲ್ಲಿ ಕಂಡುಬಂದರೆ ಮೊದಲು ವೈದ್ಯರನ್ನು ಕಾಣುವುದೊಳಿತು.
Advertisement