ಬೆಂಗಳೂರಿನ ಕನ್ನಡ ಭವನದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ 9ರ ಶನಿವಾರ ಸಂಜೆ 5.30ಕ್ಕೆ ಶ್ರೀ ಸಂಜೀವ್ ಕೊರ್ತಿ ಅವರ ಸಾರಥ್ಯದಲ್ಲಿ ಸ್ವರ ತರಂಗ್ ಆಕಾಡೆಮಿಯ ಶಿಷ್ಯವೃಂದ 20 ಸಿತಾರ್ ವಾದನವನ್ನು ಪ್ರಸ್ತುತಪಿಸಲಿದೆ. ಸ್ವರತರಂಗ್ ಅಕಾಡೆಮಿಯ ಅಧ್ಯಕ್ಷರು, ಸ್ವತಃ ಸಿತಾರ್ ವಾದಕರೂ ಆಗಿರುವ ಸಂಜೀವ್ ಕೊರ್ತಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಸಂಜೀವ್ ಕೊರ್ತಿ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಲಿರುವ ಈ ಕಾರ್ಯಕ್ರಮಕ್ಕೆ ಸುಮೀತ ನಾಯಕ್ ಮತ್ತು ಸಂತೋಷ್ ಹೆಗಡೆ ತಬಲಾ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪುಣೆಯ ಪಂ. ರಘನಂದನ ಪಣಶೀಕರ ಅವರ ಗಾಯನ, ತಬಲಾ ಸಾಥ್ ಪಂ. ಉದಯರಾಜ ಕರ್ಪೂರ, ಹಾರ್ಮೋನಿಯಂ ಡಾ. ರವೀಂದ್ರ ಕಾಥೋಟಿ ಅವರದು. ಹೆಚ್ಚಿನ ಮಾಹಿತಿಗೆ ಸಂಜೀವ್ ಕೋರ್ತಿ (9731099577) ಅವರನ್ನು ಸಂಪರ್ಕಿಸಬಹುದು.
Advertisement