
ಮರಿನಾರ ಪಾಸ್ತಾ
ಬೇಕಾಗುವ ಸಾಮಗ್ರಿ:
1 ದೊಡ್ಡ ಚಮಚೆ ಆಲಿವ್ ಎಣ್ಣೆ, ಅರ್ಧ ಚಮಚೆ ಬೆಳ್ಳುಳ್ಳಿ ಪೇಸ್ಟ್, 1 ಟೊಮೆಟೊ ಪ್ಯೂರಿ, ಪಾರ್ಸ್ಲಿ ಎಲೆ, ಅರ್ಧ ಚಮಚೆ ಕೆಂಪು ಮೆಣಸಿನಪುಡಿ, 1 ಚಮಚೆ ಒಣಗಿದ ಒರೆಗಾನ್ ಎಲೆ, 1 ಬಟ್ಟಲು ಬೇಯಿಸಿದ ಪಾಸ್ತಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಆಲಿವ್ ಎಣ್ಣೆ ಹಾಕಿ ಬಿಸಿ ಆದ ನಂತರ ಬೆಳ್ಳುಳ್ಳಿ ಪೇಸ್ಟ್‌ಹಾಕಿ ಕಂದು ಬಣ್ಣ ಬರುವರೆಗೂ ಮಂದ ಉರಿಯಲ್ಲಿ ಫ್ರೈ ಮಾಡಿ. ಟೊಮೆಟೊ ಪ್ಯೂರಿ ಹಾಕಿ ನಂತರ ಬೇಸಿಲ್, ಪಾರ್ಸ್ಲಿ, ಒರೆಗಾನ್ ಎಲೆಗಳನ್ನು ಸೇರಿಸಿ. ಕೆಂಪು ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 20 ನಿಮಿಷ ಬೇಯಲು ಬಿಡಿ. ನಂತರ ಬೇಯಿಸಿದ ಪಾಸ್ತಾದೊಂದಿಗೆ ಸವಿಯಿರಿ.
ಪಾಸ್ತಾ ಕನೇಲಿನ್ ಬೀನ್ಸ್ ಸೂಪ್
ಬೇಕಾಗುವ ಸಾಮಗ್ರಿ:
300 ಗ್ರಾಂ ಕನೇಲಿನ್ ಬೀನ್ಸ್, 1 ಬೆಳ್ಳುಳ್ಳಿ, 4 ಚಮಚೆ ಆಲಿವ್ ಎಣ್ಣೆ, 50 ಗ್ರಾಂ ಟೊಮೆಟೊ ಪ್ಯೂರಿ, 200 ಗ್ರಾಂ ಚಿಕ್ಕ ಗಾತ್ರದ ಪಾಸ್ತಾ, 400 ಮಿ.ಲೀ. ನೀರು, ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ಹಿಂದಿನ ರಾತ್ರಿ ನೆನಸಿದ ಕನೇಲಿನ್ ಬೀನ್ಸ್ ಹಾಕಿ ಕೆಲವು ನಿಮಿಷ ಬೇಯಿಸಿ. ನಂತರ ಟೊಮೆಟೊ ಪ್ಯೂರಿ, ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ 10 ರಿಂದ 15 ನಿಮಿಷ ಬೇಯಿಸಿ. ನೀರಿನ ಪ್ರಮಾಣ ಕಡಿಮೆ ಆದ ನಂತರ ಪಾಸ್ತಾ ಸೇರಿಸಿ 8ರಿಂದ 10 ನಿಮಿಷ ಬೇಯಿಸಿದರೆ ಪಾಸ್ತಾ ಕನೇಲಿನ್ ಬೀನ್ಸ್ ಸೂಪ್ ಸವಿಯಲು ಸಿದ್ಧ.
Advertisement