ಯುವಕರೇ ನೀವು ಮಿತಿಗಿಂತ ಹೆಚ್ಚು ಸಾಲ ಮಾಡಿದ್ದೀರಾ? ಹಾಗಿದ್ದರೆ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ. ಮೈತುಂಬಾ ಸಾಲ ಮಾಡಿಕೊಳ್ಳುವ ಯುವಕರು ಹೃದಯಾಘಾತದಂತಹ ಸಮಸ್ಯೆಗೆ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುತ್ತಾರಂತೆ. ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಈ ವಿಚಾರ ಬಹಿರಂಗಪಡಿಸಿದೆ. 24ರಿಂದ 30ರ ನಡುವೆ ಹೆಚ್ಚನ ಸಾಲ ಮಾಡಿಕೊಂಡಿರುವವರು ಖಿನ್ನತೆ ಮತ್ತು ಒತ್ತಡಕ್ಕೆ ಬಹುಬೇಗ ತುತ್ತಾಗುತ್ತಾರೆ. ಜತೆಗೆ ರಕ್ತದೊತ್ತಡದಂತಹ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ. ಹಾಗಾಗಿ ಅನಿವಾರ್ಯ ಕಾರಣಕ್ಕಾಗಿ ಸಾಲ ಮಾಡಿದ್ದರೂ ಕೆಲಸ, ಕುಟುಂಬದ ಸಮಸ್ಯೆ ನಡುವೆ ಆರೋಗ್ಯದ ಕುರಿತೂ ಜಾಗೃತೆ ವಹಿಸಿ. ಯೋಗ, ಧ್ಯಾನದ ಮೂಲಕ ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳಿ.