ಪ್ರತಿಭೆ ತೋರಿ ಲಕ್ಷ ಗೆಲ್ಲಿ!

ಪ್ರತಿಭೆ ತೋರಿ ಲಕ್ಷ ಗೆಲ್ಲಿ!
Updated on: 

ಸರ್ಕಾರಿ ಶಾಲಾ ಮಕ್ಕಳಿಗೊಂದು ಸುವರ್ಣ ಅವಕಾಶ. ಅವರು ತಮ್ಮಲ್ಲಿರುವ ಪ್ರಯೋಗಶೀಲತೆ, ಜ್ಞಾನ ಪ್ರದರ್ಶಿಸಿ 1.25 ಲಕ್ಷ ಗೆಲ್ಲಬಹುದು!
ಹೌದು. ಅಗಸ್ತ್ಯ ಫೌಂಡೇಷನ್, ಸೈನೋಪೊಸಿಸ್ ಕಂಪನಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಾಗಿ 'ಅನ್ವೇಷಣಾ- ಆವಿಷ್ಕಾರಕ್ಕೊಂದು ಸೇತುವೆ' ಎಂಬ ಸ್ಪರ್ಧೆ ಏರ್ಪಡಿಸಿವೆ. ಈ ಸ್ಪರ್ಧೆಯಲ್ಲಿ ಗೆದ್ದವರು ಲಕ್ಷಾಧೀಶರಾಗಬಹುದು.

ಏನಿದು ಸ್ಪರ್ಧೆ?
ಅಗಸ್ತ್ಯ ಫೌಂಡೇಷನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕಲು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಈ ಸ್ಪರ್ಧೆ ನಡೆಸುತ್ತಿದೆ. ಒಂದು ರೀತಿಯಲ್ಲಿ ಇದು 'ನೋಡಿ ಕಲಿ ಮಾಡಿ ನಲಿ' ರೀತಿಯ ಸ್ಪರ್ಧೆ. ರಾಜ್ಯದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು 'ಥೀಮ್' ನೀಡಲಾಗುತ್ತದೆ. ಆ ಥೀಮ್ ಆಧಾರದ ಮೇಲೆ ವಿದ್ಯಾರ್ಥಿಗಳು ಒಂದು 'ಪ್ರಯೋಗ' ಮಾದರಿ ಸಿದ್ಧಪಡಿಸಬೇಕು. ಈ ಸಿದ್ಧಪಡಿಸಿದ ಮಾದರಿಯನ್ನು ಸ್ಥಳೀಯ ಸರ್ಕಾರಿ ಶಾಲಾ ಮಕ್ಕಳಿಗೆ (5ರಿಂದ 9ನೇ ತರಗತಿ ಓದುತ್ತಿರುವ ಮಕ್ಕಳು) ಹೇಳಿಕೊಡಬೇಕು.

ಬಹುಮಾನ ಹೇಗೆ?
ಈ ಮಾದರಿಯ  ಕುರಿತು ತೀರ್ಪುಗಾರರಿಗೆ ವಿವರಿಸಬೇಕು. ಯಾವುದೇ ಕಾರಣಕ್ಕೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಕ್ಕಳಿಗೆ ವಿವರ ನೀಡುವಂತಿಲ್ಲ. ಉತ್ತಮ ಪ್ರಾತ್ಯಕ್ಷಿಕೆ, ತೀರ್ಪುಗಾರರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಬಹುಮಾನ ಖಚಿತ. ಬಹುಮಾನದ ಒಟ್ಟು ಮೊತ್ತ 1.25 ಲಕ್ಷ. ಐದು ಮಾದರಿಗಳಿಗೆ ಬಹುಮಾನ ನೀಡಲಾಗುತ್ತದೆ ಎನ್ನುತ್ತಾರೆ ಅಗಸ್ತ್ಯ ಫೌಂಡೇಷನ್ ಮ್ಯಾನೇಜರ್ ಹಂಸ ಸುರೇಶ್. ಮಾಹಿತಿಗಾಗಿ ಮಕ್ಕಳು ಸುರೇಶ್(94495 96367) ಅಥವಾ www.anveshana.org  ಸಂಪರ್ಕಿಸಬಹುದು.

ಶಿಕ್ಷಣ ಇಲಾಖೆಯಿಂದಲೇ ವೆಚ್ಚ
ಈ ಸ್ಪರ್ಧೆ 2014 ಫೆಬ್ರವರಿಯಲ್ಲಿ ಬೆಂಗಳೂರು ನಗರದಲ್ಲಿರುವ ಶಿಕ್ಷಕರ ಸದನದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಮತಿ ಹಾಗೂ ಶಿಕ್ಷಕರಿಗೆ ಅನ್ಯ ಕಾರ್ಯನಿಮಿತ್ತ ಸೌಲಭ್ಯ ಮಂಜೂರು ಮಾಡಲು ಪ್ರೌಢಶಿಕ್ಷಣ ನಿರ್ದೇಶಕಿ ವೀಣಾ ನಾಯಕ್ ಪತ್ರದ ಮೂಲಕ ಎಲ್ಲಾ ಶಿಕ್ಷಕರಿಗೆ ಮನವಿ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ, ದಿನದ ಭತ್ಯೆಯನ್ನು ನಿಯಮಾನುಸಾರ ಶಾಲಾ ಸಂಚಿತ ನಿಧಿಯಿಂದ ಭರಿಸಲು ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com