ವೇದಿಕ್ ಮ್ಯಾಥ್ಸ್ ಸೇವೆ

Updated on: 

ವಿದ್ಯಾರ್ಥಿಗಳ ಪಾಲಿಗೊಂದು ಸಿಹಿಸುದ್ದಿ. ಡಿಟಿಎಚ್ ಸೇವೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಟಾಟಾ ಸ್ಕೈನಲ್ಲೀಗ ವಿದ್ಯಾರ್ಥಿಗಳ ಅನುಕೂಲಕ್ಕೆ ಆ್ಯಕ್ಟಿವ್ ವೇದಿಕ್ ಮ್ಯಾಥ್ಸ್ ಸೇವೆ ಆರಂಭಿಸಲಾಗಿದೆ. ವೇದಿಕ್ ಮ್ಯಾಥ್ಸ್ ಒಕ್ಕೂಟದ ಜತೆಗೂಡಿ ಟಾಟಾಸ್ಕೈ ಈ ಸೇವೆ ಆರಂಭಿಸುತ್ತಿದೆ. ದಿನದ ಯಾವುದೇ ಅವಧಿಯಲ್ಲಿ ಮತ್ತು ಅನುಕೂಲಕ್ಕೆ ತಕ್ಕಂತೆ ಈ ವೀಡಿಯೋ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಗಣಿತವನ್ನು ಕಬ್ಬಿಣದ ಕಡಲೆಯೆಂದೇ ಭಾವಿಸಿರುವ ಎಳೆಯ ಮಕ್ಕಳಿಗೆ ವೇದಿಕ್ ಮ್ಯಾಥ್ಸ್ ಅತ್ಯುತ್ತಮ ಕಲಿಕಾ ಮಾರ್ಗವಾಗಿದೆ. ಇದರ ಮೂಲಕ ಶಾಲೆಯಲ್ಲಿ ಕಲಿತ ಗಣಿತದ ಸೂತ್ರಗಳನ್ನು ಸುಲಭವಾಗಿ ಬಿಡಿಸಲು ಸಾಧ್ಯವಾಗಲಿದೆ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿರುವವರಿಗೂ ಅಬ್ಜೆಕ್ಟಿವ್ ಮಾದರಿಯ ಗಣಿತದ ಪ್ರಶ್ನೆಗಳನ್ನು ಬಿಡಿಸಲು ಇದು ನೆರವು ನೀಡಲಿದೆ. ಮಾಹಿತಿಗೆ ವಿಕ್ರಾಂತ್ ಮೊದಲಿಯಾರ್  (ಮೊ. 9820622997) ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com