ವಿದ್ಯಾರ್ಥಿಗಳೇ ನೀವು ಸ್ಮಾರ್ಟ್‌ಪೋನ್ ಗೀಳಿಗೆ ಬಿದ್ದಿದ್ದೀರಾ? ಹಾಗಿದ್ದರೆ ಓದಿನ ವಿಚಾರದಲ್ಲಷ್ಟೇ ಅಲ್ಲ, ಫಿಟ್‌ನೆಸ್ ವಿಚಾರದಲ್ಲೂ ನೀವು ಹಿಂದೆ ಬೀಳುತ್ತಿದ್ದೀರೆಂದೇ ಅರ್ಥ. ಮೊಬೈಲ್ ಗೀಳಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳು ಫಿಟ್‌ನೆಸ್ ಕಡೆಗಣಿಸುತ್ತಾರೆ ಎಂದು ಹೇಳುತ್ತದೆ ಒಂದು ಸಂಶೋಧನೆ. ಟಿವಿ, ಕಂಪ್ಯೂಟರ್‌ಗಳಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ಗಳು ಸಣ್ಣವು. ಅಲ್ಲದೆ, ಇವುಗಳನ್ನು ಎಲ್ಲಿಗೂ ತೆಗೆದುಕೊಂಡು ಹೋಗಬಹುದು. ಇದರಿಂದಾಗಿ ದೈಹಿಕ ಚಟುವಟಿಕೆ ವೇಳೆಯೂ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಇದರಿಂದಾಗಿ ದೈಹಿಕ ಚಟುವಟಿಕೆ ಮೇಲಿನ ಅವರ ಗಮನ ಕಡಿಮೆಯಾಗುತ್ತದಂತೆ.