

ಇಂಟರ್ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಸಾಮಾಜಿಕ ಜಾಲ ತಾಣದ ದಿಗ್ಗಜ ಫೇಸ್ಬುಕ್ ಜತೆ ಸೇರಿಕೊಂಡು 13ರಿಂದ 17 ವರ್ಷದ ನಡುವಿನ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ಕೈಗೆತ್ತಿಕೊಂಡಿದೆ.
ಅದರಂತೆ ಮಕ್ಕಳು, ಶಿಕ್ಷಕರು ಮತ್ತು ಪೋಷಕರಿಗೆ ಸುರಕ್ಷತೆ ಮತ್ತು ಭದ್ರತೆಯಲ್ಲಿ ರಾಜಿಮಾಡಿಕೊಳ್ಳದೆ ಅಂತರ್ಜಾಲದಿಂದ ಯಾವ ರೀತಿ ಗರಿಷ್ಠ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಹೇಳಲಿದೆ. ಈ ಯೋಜನೆಯು ಹಂತ ಹಂತವಾಗಿ ಜಾರಿಗೆ ಬರಲಿದ್ದು ಮೊದಲ ಹಂತದಲ್ಲಿ ದೆಹಲಿ, ಮುಂಬೈ ಮತ್ತು ಹೈದರಾಬಾದ್ನಲ್ಲಿ ಅನುಷ್ಠಾನಕ್ಕೆ ಬರಲಿದೆ. ನಂತರ ಬೆಂಗಳೂರಿನ ವಿದ್ಯಾರ್ಥಿಗಳಿಗೂ ಇದರ ಪ್ರಯೋಜನ ಸಿಗಲಿದೆ.