ನಿಮ್ಮಲ್ಲಿ ಒಳ್ಳೆಯ ಸಂವಹನ ಕೌಶಲವಿದ್ದು, ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿದ್ದರೆ ಮನಃಶಾಸ್ತ್ರದಲ್ಲಿ ಖಂಡಿತವಾಗಿಯೂ ಒಳ್ಳೆಯ ಭವಿಷ್ಯ ಕಾದು ಕುಳಿತಿದೆ. ಅದೂ ಅಲ್ಲದೆ ಇಂದಿನ ಒತ್ತಡದ ಬದುಕಿನಲ್ಲಿ ಮನಶಾಸ್ತ್ರಜ್ಞರಿಗೆ ಸಾಕಷ್ಟು ಬೇಡಿಕೆ ಇದೆ.
ಸೈಕಾಲಜಿ ವಿಷಯವನ್ನು ಪಿಯುಸಿ ಹಂತದಿಂದಲೇ ಆರ್ಟ್ಸ್ ಕಾಂಬಿನೇಶನ್‌ನಲ್ಲಿ ಕೆಲ ಕಾಲೇಜುಗಳಲ್ಲಿ ಸೇರಿಸಲಾಗಿದೆ. ಪಿಯುನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಏನೇ ವಿಷಯ ಓದಿದ್ದರೂ ಡಿಗ್ರಿ ಮೊದಲ ವರ್ಷದಲ್ಲಿ ಬಿಎ ಸೈಕಾಲಜಿ ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಪತ್ರಿಕೋದ್ಯಮ, ಇಂಗ್ಲಿಷ್/ಕನ್ನಡ ಸಾಹಿತ್ಯ, ಕ್ರಿಮಿನಾಲಜಿ, ಸೋಶಿಯಾಲಜಿ ಇವುಗಳಲ್ಲಿ ಯಾವುದಾದರೂ ಎರಡು ವಿಷಯಗಳೊಡನೆ ಸೈಕಾಲಜಿಯನ್ನು ಕಲಿಯಬೇಕಾಗುತ್ತದೆ. ಪದವಿಯ ನಂತರ ಇತ್ತೀಚಿನವರೆಗೆ ಎಂಎ ಬಳಿಕ ಓದಬೇಕಾಗಿದ್ದ ಸೈಕಾಲಜಿಯನ್ನು ಈಗ ಎಂಎಸ್ಸಿಯೊಳಗೆ ಸೇರಿಸಲಾಗಿದೆ. ಪದವಿಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಆಯ್ಕೆ ಇರುತ್ತದೆ. ಆದರೆ ಎಂಎಸ್ಸಿಯಲ್ಲಿ ಆಂಗ್ಲ ಮಾಧ್ಯಮ ಮಾತ್ರ.
ಸೈಕಾಲಜಿ ವಿಷಯ ಹೊಂದಿದ ಕೆಲವು ಪದವಿ ಕಾಲೇಜುಗಳು