ಸಂಗಾತಿಗೂ ಕ್ರಿಕೆಟ್ ಕ್ರೇಜ್ ಇರ್ಬೇಕಂತೆ!

ಸಂಗಾತಿಗೂ ಕ್ರಿಕೆಟ್ ಕ್ರೇಜ್ ಇರ್ಬೇಕಂತೆ!
Updated on: 

ಸ್ಪಾಟ್ ಫಿಕ್ಸಿಂಗ್ ಹಗರಣ ಬಯಲಾದ ಬಳಿಕ ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಮುಗಿದೇ ಹೋಯ್ತು ಅನ್ನುವ ಭಾವನೆ ಹುಟ್ಟಿಕೊಂಡಿರಬಹುದು. ಆದರೆ, ದೇಶದಲ್ಲಿ ಕ್ರಿಕೆಟ್ ಅನ್ನು ಆರಾಧಿಸುವ, ಪ್ರೀತಿಸುವ ಮಂದಿ ಮೇಲೆ ಸ್ಪಾಟ್‌ಫಿಕ್ಸಿಂಗ್ ಯಾವುದೇ ಪರಿಣಾಮ ಬೀರಿದಂತಿಲ್ಲ.
ಅದರಲ್ಲೂ ಯುವಜನರಲ್ಲಿ ಕ್ರಿಕೆಟ್ ಕ್ರೇಜ್ ಇನ್ನೂ ಬತ್ತಿಲ್ಲ. ಬಹುತೇಕ ಯುವಕ, ಯುವತಿಯರು ಕ್ರಿಕೆಟ್ ಅನ್ನು ಹಿಂದಿನಂತೆ ಆರಾಧಿಸುತ್ತಿದ್ದಾರೆ. ತಮ್ಮ ಸಂಗಾತಿಗಳಿಗೂ ತಮ್ಮಷ್ಟೇ ಕ್ರಿಕೆಟ್ ಕ್ರೇಜ್ ಇರಬೇಕೆಂದು ಬಯಸುತ್ತಾರೆ.
ಐಪಿಎಲ್ ಮುಗಿದ ಬೆನ್ನಲ್ಲೇ ಶಾದಿ ಡಾಟ್‌ಕಾಂ ನಡೆಸಿದ ಸರ್ವೆಯಿಂದ ಈ ಸತ್ಯ ಬಹಿರಂಗವಾಗಿದೆ. ಸರ್ವೆಯಲ್ಲಿ ಪಾಲ್ಗೊಂಡ ಶೇ.32ರಷ್ಟು ಯುವಕರು ತಮ್ಮ ಬಾಳಸಂಗಾತಿಯೂ ಕ್ರಿಕೆಟ್ ಅನ್ನು ಪ್ರೀತಿಸಬೇಕೆಂದು ಬಯಸುತ್ತಾರಂತೆ. ಈ ವಿಚಾರದಲ್ಲಿ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡ ಯುವತಿಯರೂ ಹಿಂದೆ ಬಿದ್ದಿಲ್ಲ. ತನ್ನ ಕನಸಿನ ರಾಜನೂ ಕ್ರಿಕೆಟ್ ಪ್ರೇಮಿ ಆಗಿರಬೇಕೆಂದು ಈ ಕ್ರೀಡೆ ಕುರಿತು ಕ್ರೇಜ್ ಬೆಳೆಸಿಕೊಂಡ ಬಹುತೇಕ ಯುವತಿಯರು ಅಭಿಪ್ರಾಯಪಟ್ಟಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com