ಅಮ್ಮ ಅಮ್ಮ ಅಮ್ಮ...
ಚಂದದ ಕಥೆ ಹೇಳಮ್ಮ...
ಕನಸಿನ ಲೋಕಕೆ ಹೋಗುವೆನು
ಗಗನ ಯಾತ್ರೆಯ ಮಾಡುವೆನು
ಚಂದಿರ ಲೋಕವ ಸೇರುವೆನು
ತಾರೆಗಳ ಜೊತೆ ಮಿನುಗುವೆನು
ಅಲ್ಲಿಂದ ಜಾರುತ ಜಾರುತ
ಸಾಗರದಲಿ ಇಳಿಯುವೆನು
ಅಲೆಗಳಬ್ಬರ ಕೇಳುವೆನು
ಜಲಚರಗಳ ತಿಳಿಯುವೆನು
ಮುತ್ತು ರತ್ನಗಳ ಹೆಕ್ಕುವೆನು
ಹಾರುವ ಕುದುರೆ ಏರುವೆನು
ಮಾಯ ಲೋಕಕೆ ಜಿಗಿಯುವೆನು
ರಕ್ಕಸರೊಡನೆ ಕಾದಾಡುವೆನು
ಅಲ್ಲಿಯ ದೊರೆತನ ಪಡೆಯುವೆನು
ನಿನ್ನನು ಸುಖದೊಳಿರುಸುವೆನು
ಪ್ರಾಣಿ ಪ್ರಪಂಚಕೆ ನೆಗೆಯುವೆನು
ಆನೆಯ ಮೇಲೆ ಕೂರುವೆನು
ಸಿಂಹದ ಜೊತೆಗೂಡುವೆನು
ಪ್ರಾಣಿ-ಪಕ್ಷಿಗಳ ಪ್ರೀತಿಗಳಿಸುವೆನು
ನಿನ್ನಯ ಪ್ರೀತಿಯಲಿ ಜೀವಿಪೆನು
- ಸಾ.ಮ.ಶಿವಮಲ್ಲಯ್ಯ, ಸಾಸಲಾಪುರ.