

ಇಂದು ಆರೋಗ್ಯದ ಕುರಿತು ಕಾಳಜಿ ಕೇವಲ ಹಿರಿಯರಲಷ್ಟೇ ಇಲ್ಲ. ಯುವಕರೂ ಆರೋಗ್ಯಯುತ ಬದುಕನ್ನು ಬಯಸುತ್ತಿದ್ದಾರೆ. ನಿತ್ಯದ ಒತ್ತಡದಿಂದ ದೇಹ ಮತ್ತು ಮನಸ್ಸಿಗೆ ರಿಲ್ಯಾಕ್ಸ್ ನೀಡಲು ಬೆಂಗಳೂರಿನಂಥ ನಗರಗಳ ಜನ ಸ್ಪಾ ಥೆರಪಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಬೆಂಗಳೂರಿನಲ್ಲೇ ಸದ್ಯ ನೂರಾರು ಸ್ಪಾ ಥೆರಪಿ ಕೇಂದ್ರಗಳು, ಮಸಾಜ್ ಪಾರ್ಲರ್‌ಗಳು ತಲೆ ಎತ್ತಿವೆ. ಹೀಗಾಗಿ, ತರಬೇತಿ ಪಡೆದ ಸ್ಪಾ ಥೆರಪಿಸ್ಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸ್ಪಾ ಥೆರಪಿ ಮುಖ್ಯವಾಗಿ ಅರೋಮಾ ಥೆರಪಿ, ರಿಫ್ಲೆಕ್ಸಾಲಜಿಗಳಂಥ ವಿಷಯಗಳನ್ನೊಳಗೊಂಡಿದೆ. ಇದು ಮಾನಸಿಕ ಸಮತೋಲನಕ್ಕೆ ಅವಕಾಶ ಮಾಡಿಕೊಡುವುದಷ್ಟೇ ಅಲ್ಲ, ಫಿಟ್ನೆಸ್ ಹಾಗೂ ದೇಹಕ್ಕೆ ಅಗತ್ಯ ಪೋಷಕಾಂಶ ಕಲ್ಪಿಸಲೂ ನೆರವಾಗುತ್ತದೆ. ಈ ರೀತಿಯ ಥೆರಪಿಯ ಶಿಕ್ಷಣ ಪಡೆದವರಿಗೆ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲೂ ಬೇಡಿಕೆ ಇದೆ. ಅನುಭವಿ ಥೆರಫಿಸ್ಟ್‌ಗಳಿಗೆ ಉತ್ತಮ ವೇತನವೂ ಸಿಗುತ್ತದೆ. ಒಂದಷ್ಟು ವರ್ಷಗಳ ಅನುಭವ ಪಡೆದ ಬಳಿಕ ಸ್ಪಾ ಥೆರಪಿಸ್ಟ್ ಆಗಿ ಸ್ವಂತ ಉದ್ಯೋಗವನ್ನೂ ಆರಂಭಿಸಬಹುದು. ಬೆಂಗಳೂರಿನಂಥ ನಗರಗಳಲ್ಲಿ ಈ ರೀತಿಯ ತರಬೇತಿ ನೀಡುವ ಅನೇಕ ಸಂಸ್ಥೆಗಳೂ ಇವೆ.
ಎಲ್ಲೆಲ್ಲಿ ತರಬೇತಿ?