ಈಗೇನಿದ್ದರೂ ಸ್ಮಾರ್ಟ್‌ಫೋನ್ ಜಮಾನ. ಕರೆ ಮತ್ತು ಮೆಸೇಜ್ ಮಾಡಲು ಬಳಕೆಯಾಗುತ್ತಿದ್ದ ಮಾಮೂಲಿ ಮೊಬೈಲ್‌ಗಳೆಲ್ಲ ಮೂಲೆ ಸೇರುತ್ತಿವೆ. ವಿದ್ಯಾರ್ಥಿಗಳ ಕೈಗೂ ಈಗ ಸ್ಮಾರ್ಟ್‌ಫೋನ್ ಬಂದು ಕೂತಿದೆ. ವಿದ್ಯಾರ್ಥಿಗಳು ಹಾಗೂ ಸ್ಮಾರ್ಟ್‌ಫೋನ್ ಕುರಿತು ಇತ್ತೀಚೆಗೆ ನಡೆಸಿದ ಸರ್ವೆ ಏನು ಹೇಳುತ್ತೆ ಗೊತ್ತಾ?
60%
ದೇಶದಲ್ಲಿ ಇಷ್ಟು ಪ್ರಮಾಣದ ವಿದ್ಯಾರ್ಥಿಗಳು ಸ್ಮಾರ್ಟ್‌ಪೋನ್ ಬಳಸುತ್ತಿದ್ದಾರೆ.
75%
ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ಕರೆ, ಎಸ್‌ಎಂಎಸ್‌ಗಿಂತ ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನಕ್ಕೆ ಸ್ಮಾರ್ಟ್‌ಫೋನ್ ಕೊಳ್ಳುತ್ತಾರೆ.
33%
ವಿದ್ಯಾರ್ಥಿಗಳು ಗೇಮ್ಸ್, ಆಟ, ಇ-ಮೇಲ್, ಚಾಟ್ ಮಾಡಲು ಕಂಪ್ಯೂಟರ್, ಟ್ಯಾಬ್‌ಗಳಿಗಿಂತ ಸ್ಮಾರ್ಟ್‌ಫೋನ್‌ಗಳೇ ಉತ್ತಮ ಎನ್ನುತ್ತಾರೆ.
53.7%
ಇದು ದೇಶದಲ್ಲಿ ಆ್ಯಂಡ್ರಾಯ್ಡ್ ಫೋನ್‌ಗಳಿರುವ ವಿದ್ಯಾರ್ಥಿಗಳ ಪ್ರಮಾಣ.