

ನೀ ಸಿಕ್ಕಾಗಿನಿಂದ
ಜಗ ಸುತ್ತುವ ಆಸೆ ಹೊರಟು ಹೋಗಿದೆ;
ನಿನ್ನ ಕಣ್ಣು ನೋಡುತ್ತ
ಕುಳಿತು ಬಿಡುತ್ತೇನೆ; ಎಲ್ಲ ಮರೆತು ಬಿಡುತ್ತೇನೆ !
ನಿನ್ನ ಕಂಗಳ ನೋಡುವ ತನಕ
ಎನಗೆ ಬೆಳಗಾಗುವುದೇ ಇಲ್ಲ;
ಒಲುಮೆ ಕಿರಣಗಳು
ಎದೆ ಸೋಕದೇ!
ನಿನ್ನ ಕಣ್ಣುಗಳು ಸಾಗರದಂತೆ
ಒಮ್ಮೊಮ್ಮೆ ಮುಳುಗಿ
ಕಳೆದು ಹೋಗುತ್ತೇನೆ;
ದಡ ಸೇರುವ ಹಂಬಲವಿಲ್ಲದೇ!
ನಿನಗಿಂತ, ನಿನ್ನ ಕಣ್ಣಿನ ಮಾತೇ
ನನಗಿಷ್ಟ; ಅದಕೆ ಸುಳ್ಳು ಹೇಳಲು
ಬರುವುದೇ ಇಲ್ಲ!
ಪ್ರೀತಿ ಕುರುಡು ಎಂದು
ಯಾರು ಹೇಳಿದ್ದು;
ನಮ್ಮ ಪ್ರೀತಿ ಹುಟ್ಟಿದ್ದೇ ಕಣ್ಣಿಂದ!
= ಪರೇಶ ಸರಾಫ