ನಗಬೇಕಮ್ಮಾ ನಗಬೇಕು...

Updated on: 

ಮುಂಚೆ ಚಾಲ್ತಿಯಲ್ಲಿದ್ದ ಗಾದೆ: ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?
ಈಗಿನ ಕಾಲಮಾನದ ಗಾದೆ: ಊರಿಗೆ ಬಂದವ ಬಾರ್‌ಗೆ ಬರದೇ ಇರ್ತಾನಾ?
=
ಸೇಲ್ಸ್‌ಮ್ಯಾನ್: ಸಾ... ನಿಮ್ಗೆ ಈ ಪೌಡರ್ ಬೇಕಾ..?
ರಾಂಪ: ಇದು ಯಾರಿಗೆ?
ಸೇಲ್ಸ್‌ಮ್ಯಾನ್: ಇಲಿಗಳಿಗೆ ಸಾರ್..!
ರಾಂಪ: ಬೇಡ... ಬೇಡ... ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್‌ಸ್ಟಿಕ್ ಕೇಳ್ಬಹುದು..!
=
ಗುಂಡ: ಒಂದು ತಿಂಗಳ ನಂತರ ನಾನು ವರದಕ್ಷಿಣೆ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇನೆ.
ತಿಮ್ಮ: ಒಂದು ತಿಂಗಳು ಬಿಟ್ಟು ಯಾಕೆ? ಇಂದಿನಿಂದಲೇ ಶುರು ಮಾಡು.
ಗುಂಡ: ಯಾಕೆಂದರೆ, ಈ ತಿಂಗಳು ನನ್ನ ಮತ್ತು ಅದಾದ ಹತ್ತು ದಿನದಲ್ಲಿ ನನ್ನ ಸಹೋದರನ ಮದುವೆ ಇದೆ.
=
ಗುಂಡಿ: ಈ ವಾರ ಫುಲ್ ಸಿನಿಮಾಗೆ ಹೋಗೋಣಾ......ಬರುವ ವಾರ ಫುಲ್ ಶಾಪಿಂಗ್  ಮಾಡೋಣ...
ಗುಂಡ: ಅದರ ಮುಂದಿನ ವಾರ ಫುಲ್ ದೇವಸ್ಥಾನಕ್ಕೆ ಹೋಗೋಣಾ.
ಗುಂಡಿ: ಯಾಕೆ?
ಗುಂಡ: ಭಿಕ್ಷೆ ಬೇಡೋಕೆ!
=
ಗುಂಡ ಫೋಟೋ ತೆಗ್ಸೋಕೆ ಸ್ಟುಡಿಯೋಕೆ ಹೋದ...
ಗುಂಡ: ಸರ್ ನಿಮ್ಮಲ್ಲಿ... ಪಾಸ್‌ಪೋರ್ಟ್ ಸೈಜ್ ಫೋಟೋನಲ್ಲಿ ಚಪ್ಪಲಿ ತನಕ ಫೋಟೋ ತೆಗೆಯೋಕಾಗುತ್ತಾ?
ಅಂಗಡಿ ಮಾಲೀಕ: ಬರುತ್ತೆ, ಆದ್ರೆ ನೀವು ಚಪ್ಪಲಿ ತಲೆಮೇಲೆ ಇಟ್ಕೊಂಡ್ರೆ ಮಾತ್ರ!
=
ಕಬ್ಬನ್ ಪಾರ್ಕಿನ ಮರಗಳ ಕಾಡಿನ ನಡುವೆ ಚೆಲುವೆ, ಚೆಲುವರಿಬ್ಬರೂ ಕೈಯಲ್ಲಿ ಕೈಹಿಡಿದು ಮಾತಾಡ್ತಾ ಕುಳಿತಿರ್ತಾರೆ...
ಚೆಲುವೆ: ಈಗ ಏನು ಮಾಡ್ತಾ ಇದ್ದಿಯಾ, (ತಡೆದು) ಕೈ ಹಿಡ್ಕೊಂಡಿದ್ದೀನಿ ಅನ್ಬೇಡಾ. ಕೆಲಸ ಏನ್ ಮಾಡ್ತಾ ಇದ್ದೀಯಾ?
ಚೆಲುವ: 'ಕನ್ನಡಪ್ರಭ'ದಲ್ಲಿ ಕೆಲಸ ಮಾಡ್ತಿದ್ದೆ, ಈಗ ಬಿಟ್ಬಿಟ್ಟೆ.
ಚೆಲುವೆ: ಓ ಮೈ ಗಾಡ್! (ಕೈ ಸೆಳೆದುಕೊಂಡು) ಅಂಥ ಉತ್ತಮವಾದ ಕೆಲಸ ಯಾಕೆ ಬಿಟ್ಟೆ?
ಚೆಲುವ: ಅಯ್ಯೋ, ಯಾರಿಗೆ ಬೇಕು ದಿನಾ ಬೆಳಗ್ಗೆ ಎದ್ದು ಪೇಪರ್ ಹಾಕುವ ಕೆಲಸ! (ಹುಡುಗಿ ಪರಾರಿ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com