

ಅಂದು ಅಮ್ಮ ಅಕ್ಕಿ ಹಸನು ಮಾಡುತ್ತಿದ್ದಳು
ಅಕ್ಕಿ ಸರಿಸಿ ಭತ್ತ ಹೊರಗೆ ಎಸೆಯುತ್ತಿದ್ದಳು
ಇದನ್ನು ನೋಡಿ ಗುಬ್ಬಿಗಳು ಹಾರಿ ಬಂದವು
ಭತ್ತ ಒಡೆದು ಅಕ್ಕಿ ತಿಂದು ಹಾರಿ ಹೋದವು
ಒಂದು ಎರಡಲ್ಲ ಸಲ ಸಲವೂ
ಭತ್ತಕ್ಕಾಗಿ ಗುಬ್ಬಿ ಓಡೋಡಿ ಬಂದವು
ಇದನ್ನು ನೋಡುತ್ತಿದ್ದ ನಾನು ಬೆರಗಾದೆನು
ಎಸೆದ ಭತ್ತ ಹಸಿದು ಬಂದ ಗುಬ್ಬಿಗಾಯಿತು
ಇಂಥ ಬುದ್ಧಿ ಗುಬ್ಬಿಗೆ ಹೇಗೆ ಬಂದಿತು?
ದೇವನೊಲುಮೆ ಒಂದು ಇದ್ದರೆ ಎಲ್ಲ ಸಂದೀತು
-ರಶ್ಮಿ. ಆರ್. ಮಾಳಾಪುರ9ನೇ ತರಗತಿ, 'ಬಿ' ವಿಭಾಗ, ಲೊಯೋಲಾ ಪ್ರೌಢಶಾಲೆ, ಬೆಟಗೇರಿ