ಬರ್ದ್ವಾನ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಬಂಧನ

ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ಅಕ್ಟೋಬರ್ 2ರಂದು ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ...
ಎನ್‌ಐಎ
ಎನ್‌ಐಎ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ಅಕ್ಟೋಬರ್ 2ರಂದು ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ರಾತ್ರಿ ಸ್ಫೋಟದ ನಾಲ್ಕನೇ ಆರೋಪಿ ಎಂದು ಶಂಕಿಸಲಾಗುತ್ತಿರುವ ಶಹನೂರ್ ಆಲಂ ಎಂಬಾತನನ್ನು ಅಸ್ಸಾಂನಲ್ಲಿ ಬಂಧಿಸಿದೆ.

ಶಹನೂರ್ ಆಲಂ, ಜಮಾತ್ ಉಲ್ ಮುಜಾಹಿದ್ದೀನ್ ಬಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಗಳಿಗೆ ಹಣ ಸರಬರಾಜು ಮಾಡುತ್ತಿದ್ದನು ಎನ್ನಲಾಗುತ್ತಿದೆ.

ಕೇಂದ್ರ ರಕ್ಷಣಾ ಸಂಸ್ಥೆಯ ಸಹಾಯದಿಂದ ಎನ್‌ಐಎ ತಂಡ ಆಲಂ ನನ್ನು ಅಸ್ಸಾಂನ ನಲ್ಬಾರಿ ಜಿಲ್ಲೆಯಿಂದ ಬಂಧಿಸಿದೆ.

ಪ್ರಸ್ತುತ ಸ್ಫೋಟದ ಪ್ರಧಾನ ರುವಾರಿ ಸಾಜಿದ್ ಅಲಿಯಾಸ್ ಶೇಖ್ ರಹಮತುಲ್ಲಾ, ಮ್ಯಾನ್‌ಮಾರ್ ಪ್ರಜೆ ಖಾಲೀದ್ ಮೊಹಮ್ಮದ್ ಮತ್ತು ಅಬ್ದಿಲ್ ಹಕೀಂ ಮೊದಲಾದವರನ್ನು ಎನ್‌ಐಎ ಬಂಧಿಸಿದ್ದು, ಇವರೆಲ್ಲರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಾಜಿದ್ ಬಂಧನಕ್ಕೊಳಗಾದ ಕೂಡಲೇ ಆಲಂ ವಿಚಾರ ಹೊರಗೆ ಬಂದಿತ್ತು. ಅನಂತರ ಎನ್‌ಐಎ ಆಲಿಂ ಜಾಡು ಹಿಡಿದು ತನಿಖೆ ಆರಂಭಿಸಿತ್ತು.

ಕಳೆದ ತಿಂಗಳು ತನಿಖಾ ತಂಡ ಆಲಂನ ಪತ್ನಿಯನ್ನು ಬಂಧಿಸಿದ್ದು, ಆ ವೇಳೆ ಆಲಂ ತಲೆಮರೆಸಿಕೊಂಡಿದ್ದನು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com