
ಅಹಮದಾಬಾದ್: ಶೊರಬುದ್ದೀನ್ ಶೇಕ್ ಮತ್ತು ತುಳಸಿ ಪ್ರಜಾಪತಿ ಅವರ ನಕಲಿ ಎನ್ ಕೌಂಟರ್ ಪ್ರಕರಣಗಳಲ್ಲಿ ತನ್ನ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಮಾಡಿದ್ದ ಅಮಿತ್ ಷಾ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಬಿಐ, ಈ ಎನ್ ಕೌಂಟರ್ ಗಳಲ್ಲಿ ಅಮಿತ್ ಷಾ ಭಾಗಿಯಾಗಿರುವುದಕ್ಕೆ ನಮ್ಮಲ್ಲಿ ಪುರಾವೆಗಳಿವೆ ಎಂದು ಸೋಮವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ನವೆಂಬರ್ ೨೦೦೧೫ ರಲ್ಲಿ ಗುಜರಾತ್ ಪೊಲೀಸರು ನಕಲಿ ಎನ್ ಕೌಂಟರ್ ನಲ್ಲಿ ಶೇಕ್ ಮತ್ತು ಅವನ ಪತ್ನಿ ಕೌಸರ್ ಬಿ ಅವರನ್ನು ಕೊಂದಿದ್ದರು. ನಂತರ ಡಿಸೆಂಬರ್ ೨೦೦೬ ರಲ್ಲಿ ತುಳಸಿ ಅವರ ಕೊಲೆಯಾಗಿತ್ತು. ಆಗ ಗುಜರಾತ್ ನ ಗೃಹ ಖಾತೆಗೆ ರಾಜ್ಯ ಸಚಿವರಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಈ ಪ್ರಕರಣದಲ್ಲಿ ಬಂಧಿಸಿ ಅವರ ವಿರದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ನಂತರ ಜಮೀನು ನೀಡಲಾಗಿತ್ತು. ಈ ಎರಡೂ ಪ್ರಕರಣಗಳನ್ನು ಒಗ್ಗೂಡಿಸಿ, ಸುಪ್ರೀಮ್ ಕೋರ್ಟ್ ವಿಚಾರಣೆಯನ್ನು ಗುಜರಾತ್ ನಿಂದ ಹೊರಗೆ ಅಂದರೆ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ನಡೆಯುವಂತೆ ಆದೇಶ ನೀಡಿತ್ತು.
ಹಿಂದಿನ ಯು ಪಿ ಎ ಸರ್ಕಾರ ಸಿ ಬಿ ಐ ನ್ನು ದಾಳವಾಗಿ ಬಳಸಿಕೊಂಡು ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ, ಆದುದರಿಂದ ತಮ್ಮನ್ನು ಈ ಪ್ರಕರಣದಿಂದ ಮುಕ್ತಗೊಳಿಸುವಂತೆ ನ್ಯಾಯಾಲಯಕ್ಕೆ ಅಮಿತ್ ಷಾ ಮನವಿ ಸಲ್ಲಿಸಿದ್ದರು.
Advertisement