ಮೆಹ್ದಿ ಬಂಧನದ ನಂತರ ಇಸ್ಲಾಮಿಕ್ ರಾಜ್ಯವನ್ನು ನಿಷೇಧಿಸಿದ ಸರ್ಕಾರ

ಉಗ್ರಗಾಮಿ ಸಂಸ್ಥೆ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಅನ್ನು ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ...
ಐ ಎಸ್ ಸಂಸ್ಥೆಯ ಬರಹ
ಐ ಎಸ್ ಸಂಸ್ಥೆಯ ಬರಹ

ನವದೆಹಲಿ: ಉಗ್ರಗಾಮಿ ಸಂಸ್ಥೆ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಅನ್ನು ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ನಿಷೇದಿಸಲಾಗಿದೆ ಎಂದು ಮಂಗಳಾವರ ಲೋಕಸಭೆಯಲ್ಲಿ ಕೆಂದ್ರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ಕಾಯ್ದೆಯ ೩೩ ನೆ ಅಂಶದಡಿ ಈ ಸಂಸ್ಥೆಯನ್ನು ಉಗ್ರಗಾಮಿ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಐ ಎಸ್ ಪರ ಟ್ವೀಟ್ ಮಾಡುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ ಬೆಂಗಳೂರಿನಲ್ಲಿ ಬಂಧಿತನಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಐ ಎಸ್ ಅನ್ನು ನಿಷೇಧಿಸಿದೆ.

ಯುಎಪಿಎ ಕಾಯ್ದೆಯ ೩೩ ನೆ ಅಂಶವನ್ನು ವಿವರಿಸಿದ ರಾಜನಾಥ್, ವಿಶ್ವಸಂಸ್ಥೆ ನಿಷೇಧಿಸಿರುವ ಯಾವುದೇ ಉಗ್ರಗಾಮಿ ಸಂಸ್ಥೆ, ಸದಸ್ಯ ರಾಷ್ಟ್ರಗಳ ನಿಷೇಧಿತ ಸಂಸ್ಥೆಗಳ ಪಟ್ಟಿಯಲ್ಲೂ ಸೇರ್ಪಡೆಯಾಗುತ್ತದೆ. ಭಾರತದಲ್ಲಿ ಐ ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಸಂಖ್ಯೆ ನಗಣ್ಯ, ಈ ತೀವ್ರಗಾಮಿ ಸಂಸ್ಥೆಯು ಪ್ರಚಾರ ಪಡೆಯದಂತೆ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಕೂಡ ರಾಜನಾಥ್ ತಿಳಿಸಿದ್ದಾರೆ.

ಕಾಂಗ್ರೆಸ್ ನ ಎಂ ರಾಮಚಂದ್ರನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜನಾಥ್, ಐ ಎಸ್ ನೇಮಕಾತಿಯನ್ನು ನಿರಾಕರಿಸುವ ಅಲ್ಪಸಂಖ್ಯಾತ ಸಮುದಾಯಕ್ಕೆ ಕೃತಜ್ಞತೆ ತಿಳಿಸಿದ್ದಾರೆ. "ಸಿರಿಯಾ ಮತ್ತು ಇರಾಕಿನಲ್ಲಿ ಐ ಎಸ್ ಚಟುವಟಿಕೆಗಳಿಗೆ ಸೇರದಂತೆ ತೀವ್ರಗಾಮಿ ಯುವಕರಿಗೆ ಸಮುದಾಯ ಬುದ್ಧಿ ಹೇಳುತ್ತಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com