ಉಗ್ರರಿಗೆ ಮರಣ ದಂಡನೆ ನಿಷೇಧವನ್ನು ತೆರವುಗೊಳಿಸಿದ ಪಾಕಿಸ್ತಾನ

ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ ಮರಣ ದಂಡನೆ ಶಿಕ್ಷೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ.
ಸೇನಾಶಾಲೆಯಲ್ಲಿ ನಡೆದ ಉಗ್ರರ ದಾಳಿಯ ಒಂದು ಚಿತ್ರ
ಸೇನಾಶಾಲೆಯಲ್ಲಿ ನಡೆದ ಉಗ್ರರ ದಾಳಿಯ ಒಂದು ಚಿತ್ರ

ಇಸ್ಲಮಾಬಾದ್: ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ
ಮರಣ ದಂಡನೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ. ಪಾಕಿಸ್ತಾನದ ಪೇಶಾವರ್ ಜಿಲ್ಲೆಯ ಸೇನಾ ಶಾಲೆಯಲ್ಲಿ ೧೩೨ ಮಕ್ಕಳನ್ನು ತಾಲಿಬಾನ್ ಉಗ್ರರು ಬರ್ಬರ ಹತ್ಯೆಗೈದ ಒಂದು ದಿನದ ನಂತರ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ.

ಉಗ್ರಗಾಮಿ ಚಟುವಟಿಕೆ ಸಂಬಂಧಿತ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯ ನಿಷೇಧವನ್ನು ತೆರವುಗೊಳಿಸಿರುವ ಹಿನ್ನಲೆಯಲ್ಲೇ, ಸಧ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಗ್ರರು ಗಲ್ಲು ಶಿಕ್ಷೆಗೆ ಒಳಪಡಬಹುದು ಎನ್ನಲಾಗಿದೆ.

ಪೇಶಾವರ್ ನ ಈ ದಾಳಿಯನ್ನು "ಅನಾಗರಿಕರ ನಡೆಸಿದ ರಾಷ್ಟ್ರೀಯ ದುರಂತ" ಎಂದು ಸರ್ವಪಕ್ಷ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ತಿಳಿಸಿದ್ದಾರೆ.

ಮಂಗಳವಾರ ನಡೆದ ಈ ಬರ್ಬರ ದಾಳಿಯಲ್ಲಿ ೧೩೨ ಮಕ್ಕಳನ್ನು ಒಳಗೊಂಡಂತೆ ೧೪೮ ಜನ ಮೃತಮಟ್ಟಿದ್ದರು. ಈ ಘಟನೆ ಇಡೀ ದೇಶವನ್ನು ದುಖಃದಲ್ಲಿ ಮುಳುಗಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com