ಚಿತ್ರಹಿಂಸೆಯ ವಿರುದ್ಧದ ನೀತಿಗಳಲ್ಲಿ ಅಮೇರಿಕಾ ದೊಡ್ಡಣ್ಣನಂತಿರಬೇಕು: ಏಂಜಲೀನಾ ಜೋಲಿ

ಏಂಜಲೀನಾ ಜೋಲಿ
ಏಂಜಲೀನಾ ಜೋಲಿ

ಲಂಡನ್: ಯು ಎಸ್ ಚಿತ್ರಹಿಂಸೆಯ ವಿರುದ್ಧದ ನೀತಿಗಳಲ್ಲಿ ವಿಶ್ವವನ್ನು ಮುನ್ನಡೆಸಬೇಕು ಎಂದಿದ್ದಾರೆ ಖ್ಯಾತ ಹಾಲಿವುಡ್ ನಟಿ ಏಂಜಲೀನಾ ಜೋಲಿ. "ಪ್ರಜಾಪ್ರಭುತ್ವದ ಮುಂಚೂಣಿಯಲ್ಲಿರುವ ಯಾವುದೆ ದೇಶ ಉದಾಹರಣೆಯಂತಿರಬೇಕು" ಎಂದಿದ್ದಾರೆ.

೯/೧೧ ದಾಳಿಯ ನಂತರ ಶಂಕಿತರ ವಿಚಾರಣೆಯಲ್ಲಿ ಬರ್ಬರ ಹಿಂಸೆ ನೀಡಿರುವ ವರದಿಯ ಹಿನ್ನಲೆಯಲ್ಲಿ ಏಂಜಲೀನಾ ಜೋಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.

"ಚಿತ್ರಹಿಂಸೆಯ ವಿರುದ್ದ ಕಾನೂನು ಇರುವುದಕ್ಕೆ ಕಾರಣಗಳಿವೆ. ಜಿನಿವಾ ನಡವಳಿಗಳಿರುವುದಕ್ಕೆ ಕಾರಣಗಳಿವೆ. ನಾವು ಅವುಗಳನ್ನು ಅನುಸರಿಸಬೇಕು" ಎಂದಿದ್ದಾರೆ ಚಿತ್ರನಟಿ.

"ನಾವು ಬೇರಯವರು ಒಂದು ನಿರ್ದಿಷ್ಟ ಮಾದರಿಯಲ್ಲಿ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸುವುದಾದರೆ ಅದನ್ನು ನಾವು ಮುಂಚೂಣಿಯಲ್ಲಿ ಅನುಸರಿಸಬೇಕು" ಎಂದಿದ್ದಾರೆ.

೨೦೦೧ ರಲ್ಲಿ ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿದ್ದ ನಟಿ ಜೋಲಿ, ಸುಡಾನ್, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಲ್ಲಿ ಹಲವಾರು ನಿರಾಶ್ರಿತರನ್ನು ಭೇಟಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com