ಕಲ್ಲಿದ್ದಲು ಘಟಕ
ಪ್ರಧಾನ ಸುದ್ದಿ
ಮೊದಲ ಸುತ್ತಿನ ಹರಾಜಿನಲ್ಲಿ 101 ಘಟಕಗಳ ಹಂಚಿಕೆ: ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಘಟಕ ಹಂಚಿಕೆಯ ಮೊದಲ ಸುತ್ತಿನ ಹರಾಜಿನಲ್ಲಿ 101 ಘಟಕಗಳ ಹಂಚಿಕೆ ನಡೆಸಲು...
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆಯ ಮೊದಲ ಸುತ್ತಿನ ಹರಾಜಿನಲ್ಲಿ 101 ಘಟಕಗಳ ಹಂಚಿಕೆ ನಡೆಸಲು ಕಲ್ಲಿದ್ದಲು ಸಚಿವಾಲಯ ತೀರ್ಮಾನಿಸಿದೆ.
ಈ ಮೊದಲು 92 ಘಟಕಗಳ ಹಂಚಿಕೆ ನಡೆಸುವುದಾಗಿ ಹೇಳಲಾಗಿದ್ದರೂ ಘಟಕಗಳ ಸಂಖ್ಯೆಯನ್ನೀಗ ಏರಿಸಲಾಗಿದೆ.
ಆರಂಭದಲ್ಲಿ ನಾವೀಗ 74 ಘಟಕಗಳ ಹಂಚಿಕೆ ಮಾಡುವುದಾಗಿ ತೀರ್ಮಾನಿಸಿದ್ದೆವು. ನಂತರ ಅವಶ್ಯಕತೆಗಳನ್ನು ಪರಿಗಣಿಸಿ ಶೆಡ್ಯೂಲ್-1 ನಲ್ಲಿ ಹೆಚ್ಚುವರಿ 27 ಘಟಕಗಳ ಹಂಚಿಕೆ ಬಗ್ಗೆ ನಿರ್ಧರಿಸಿದೆವು. ಈ 101 ಬ್ಲಾಕ್‌ಗಳಲ್ಲಿ 65ನ್ನು ನಿಯಂತ್ರಿತ ವಿಭಾಗ (ವಿದ್ಯುತ್) ಮತ್ತು ಇನ್ನುಳಿದವುಗಳನ್ನು ನಿಯಂತ್ರಿತವಲ್ಲದ ವಿಭಾಗ ( ಕಬ್ಬಿಣ ಮತ್ತು ಸ್ಟೀಲ್, ಸಿಮೆಂಟ್ ಮೊದಲಾದವುಗಳಿಗೆ) ಹಂಚಲಾಗುವುದು ಎಂದು ಕಲ್ಲಿದ್ದಲು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಅದೇ ವೇಳೆ ಇಷ್ಟು ಘಟಕಗಳು ಹರಾಜಿನ ಸಮಯಕ್ಕೆ ಎಲ್ಲರಿಗೂ ಸಿಗುವಂತಾಗಲು ಅನುಮತಿ ಪಡೆಯುವುದಕ್ಕೆ ನಾವು ಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ