
ನವದೆಹಲಿ: ರಾಜ್ಯಸಭೆಯಲ್ಲಿ ಮತಾಂತರ ವಿವಾದ ವಿಚಾರದಿಂದಾಗಿ ಕಲಾಪ ಸ್ಥಗಿತಗೊಳ್ಳುತ್ತಿದ್ದುದರ ಬಗ್ಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು, ಇಂಥಾ ಯುಕ್ತಿಗಳ ಬಗ್ಗೆ ಜನರು ಆಸಕ್ತಿ ವಹಿಸಿಲ್ಲ ಎಂದಿದ್ದಾರೆ.
ರಾಜ್ಯಸಭಾ ಕಲಾಪ ಮುಂದುವರಿಯಲು ಬಿಡುವಂತೆ ವಿಪಕ್ಷಗಳಿಗೆ ಮನವಿ ಮಾಡಿದ ನಾಯ್ಡು, ವಿಪಕ್ಷಗಳು ಚರ್ಚೆ ನಡೆಸಬಹುದು, ತೀರ್ಮಾನ ಕೈಗೊಳ್ಳಬಹುದು ಇಲ್ಲವೇ ನಿರಾಕರಿಸಬಹುದು ಆದರೆ ಕಲಾಪಕ್ಕೆ ಅಡ್ಡಿಯೊಡ್ಡುವ ಮೂಲಕ ಜನರಿಗೆ ಸಹಾಯ ಮಾಡುತ್ತಿಲ್ಲ.
ಅದೇ ವೇಳೆ ಮತಾಂತರ ವಿವಾದದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ನಾಯ್ಡು, ಜನರು ತಾವಾಗಿಯೇ ಮತಾಂತರಗೊಳ್ಳುತ್ತಿದ್ದರೆ ಅದರಲ್ಲಿ ಸಮಸ್ಯೆಯೇನಿಲ್ಲ. ಆದರೆ ಬಲವಂತವಾಗಿ ಮತಾಂತರ ಮಾಡುತ್ತಿದ್ದರೆ ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳಲೇ ಬೇಕಾಗುತ್ತದೆ.
ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಸರಿಯಾದ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇದ್ದರೆ, ಕೇಂದ್ರ ಕಾನೂನು ಇದೆ. ಈ ನಿಯಮ ದೇಶಕ್ಕೇ ಅನ್ವಯಿಸುತ್ತದೆ. ಆದರೆ ಇದಕ್ಕೆ ವಿಪಕ್ಷಗಳು ಸರಿಯಾಗಿ ಪ್ರತಿಕ್ರಯಿಸುತ್ತಿಲ್ಲ ಎಂದು ಹೇಳಿದ್ದಾರೆ.
Advertisement