ಅಮೇರಿಕಾ ಮೇಲೆ ದಾಳಿ ಬೆದರಿಕೆ ಹಾಕಿದ ಉತ್ತರ ಕೊರಿಯಾ

ಎಚ್ಚರಿಕೆ ವಹಿಸದೆ ಬರಾಕ್ ಒಬಾಮಾ, ಪ್ಯೋಂಗ್ ಯಾಂಗ್ ಸೋನಿ ಪಿಕ್ಚರ್ಸ್ ಮೇಲೆ ಸೈಬರ್ ದಾಳಿ ನಡೆಸಿದೆ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್

ಸಿಯೋಲ್: ಎಚ್ಚರಿಕೆ ವಹಿಸದೆ ಬರಾಕ್ ಒಬಾಮಾ, ಪ್ಯೋಂಗ್ ಯಾಂಗ್ ಸೋನಿ ಪಿಕ್ಚರ್ಸ್ ಮೇಲೆ ಸೈಬರ್ ದಾಳಿ ನಡೆಸಿದೆ ಎಂದು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ, ಇದರ ಪರಿಣಾಮವಾಗಿ ವೈಟ್ ಹೌಸ್, ಪೆಂಟಗನ್ ಮತ್ತು "ಭಯೋತ್ಪಾದನೆಯ ಪಾಪಕೂಪವಾಗಿರುವ ಇಡೀ ಯು ಎಸ್ ನೆಲದ" ಮೇಲೆ ದಾಳಿ ನಡೆಸಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಎಚ್ಚರಿಸಿದೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಅವರ ಮೇಲೆ "ದ ಇಂಟರ್ ವ್ಯೂ" ಎಂಬ ಹಾಸ್ಯಮಯ ಚಿತ್ರವನ್ನು ಸೋನಿ ಪಿಕ್ಸ್ಚರ್ಸ್ ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಬೇಕಿತ್ತು. ಆದರೆ ಉತ್ತರ ಕೊರಿಯಾದ ಸೈಬರ್ ದಾಳಿಯಿಂದ ಸೋನಿ ಸಂಸ್ಥೆ ಸಿನೆಮಾ ಬಿಡುಗಡೆ ಮಾಡಲು ಅಡ್ಡಿಯಾಗಿದೆ, ಇದು ಸೈಬರ್ ಭಯೋತ್ಪಾದನಾ ದಾಳಿ ಎಂದು ಅಮೇರಿಕಾ ಉತ್ತರ ಕೊರಿಯವನ್ನು ದೂಷಿಸಿತ್ತು.

ಉತ್ತರ ಕೊರಿಯಾವನ್ನು ಭಯೋತ್ಪಾದನಾ ರಾಷ್ಟ್ರಗಳ ಪಟ್ಟಿಯಲ್ಲಿ ಮತ್ತೆ ಸೇರಿಸುವ ಚಿಂತನೆಯನ್ನು ವಾಶಿಂಗ್ ಟನ್  ನಡೆಸುತ್ತಿದೆ ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com