
ಮುಂಬೈ: ಅನ್ಯಧರ್ಮಗಳಿಂದ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂದಿರುವ ಶಿವಸೇನೆ "ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಾಗ ಮೌನವಾಗಿದ್ದದ್ದೇಕೆ" ಎಂದು ಟೀಕಿಸಿದೆ.
"ನೆನ್ನೆಯವರೆಗೂ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮತಾಂತರ ಮಾಡಲಾಗುತ್ತಿತ್ತು. ಆಗ ಅದನ್ನು ಯಾರೂ ಬಲಾತ್ಕಾರದ ಮತಾಂತರ ಎನ್ನಲಿಲ್ಲ. ಈಗ ಗಂಗಾ ಹಿಂದಕ್ಕೆ ಹರಿಯಲು ಪ್ರಾರಂಭಿಸಿದೆ, ಈಗ ಹುಸಿ ಜಾತ್ಯಾತೀತವಾದಿಗಳು ಮತಾಂತರ ತಪ್ಪು ಎನ್ನುತ್ತಿದ್ದಾರೆ" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಅಭಿಪ್ರಾಯ ಮಂಡಿಸಿದೆ.
"ಮೊಘಲರ ಆಳ್ವಿಕೆಯಲ್ಲಿ ಬಲಾತ್ಕಾರದಿಂದ ಮುಸ್ಲಿಂ ಧರ್ಮಕ್ಕೆ ಮತಾತಂತರಗೊಂಡ ಹಿಂದೂಗಳ ಬಗ್ಗೆ ಹಾಗೂ ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂದ ಹಿಂದೂಗಳ ಬಗ್ಗೆ ಈ ಜಾತ್ಯಾತೀತವಾದಿಗಳು ಏನೆನ್ನುತ್ತಾರೆ?" ಎಂದು ಸೇನಾ ಪ್ರಶ್ನಿಸಿದೆ.
"ಬಿಜೆಪಿ ಪಕ್ಷದ ಹಲವಾರು ಜನ ಈ ಮರು ಮತಾಂತರದ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ, ಆದರೆ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವುದರಿಂದ ಉಭಯ ಸಂಕಟಕ್ಕೆ ಬಿದ್ದಿದ್ದಾರೆ" ಎಂದಿದೆ
ಅಯೋಧ್ಯೆದಲ್ಲಿ ಶೀಘ್ರವಾಗಿ ರಾಮ ದೇವಸ್ಥಾನವನ್ನು ಕಟ್ಟಬೇಕು ಎನ್ನುವ ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯಕ ಅವರ ಆಶಯಕ್ಕೂ ಶಿವಸೇನೆಯ ಸಹಮತವಿದೆ ಎಂದಿದ್ದಾರೆ.
Advertisement