"ದಿ ಇಂಟರ್ ವ್ಯೂ" ಸಿನೆಮಾದ ಎಲ್ಲ ಕುರುಹುಗಳನ್ನು ಅಂತರ್ಜಾಲದಿಂದ ಅಳಿಸಿ ಹಾಕಿದ ಸೋನಿ

ಸಾಮಾಜಿಕ ಜಾಲತಾಣಗಳಿಂದ ಮತ್ತು ಅಂತರ್ಜಾಲದಿಂದ "ದಿ ಇಂಟರ್ ವ್ಯೂ" ಸಿನೆಮಾದ ಎಲ್ಲ ಮಾಹಿತಿಗಳನ್ನು...
"ದಿ ಇಂಟರ್ ವ್ಯೂ" ಸಿನೆಮಾದ ಭಿತ್ತಿಚಿತ್ರ
"ದಿ ಇಂಟರ್ ವ್ಯೂ" ಸಿನೆಮಾದ ಭಿತ್ತಿಚಿತ್ರ

ಸಾಮಾಜಿಕ ಜಾಲತಾಣಗಳಿಂದ ಮತ್ತು ಅಂತರ್ಜಾಲದಿಂದ "ದಿ ಇಂಟರ್ ವ್ಯೂ" ಸಿನೆಮಾದ ಎಲ್ಲ ಮಾಹಿತಿಗಳನ್ನು ಸೋನಿ ಪಿಕ್ಚರ್ಸ್ ತೆಗೆದು ಹಾಕಿದೆ. ಸಿನೆಮಾದ ಫೇಸ್ ಬುಕ್ ಮತ್ತು ಟ್ವಿಟರ್ ಪೇಜುಗಳನ್ನು ಕಿತ್ತು ಹಾಕಿರುವುದಲ್ಲದೆ, ಯೂ ಟ್ಯೂಬ್ ನಲ್ಲಿದ್ದ ಎಲ್ಲ ಟ್ರೇಲರ್ ಗಳನ್ನೂ ಅಳಿಸಿ ಹಾಕಿದೆ.

ಕ್ರಿಸ್ಮಸ್ ಹಬ್ಬಕ್ಕೆ ಈ ಸಿನೆಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು ಸೋನಿ ಪಿಕ್ಚರ್ಸ್. ಇದಕ್ಕೆ ವಿರುದ್ಧವಾಗಿ ಭಯೋತ್ಪಾದನಾ ದಾಳಿ ನಡೆಸುವುದಾಗಿ ಕೆಲವು ಸಂಸ್ಥೆಗಳು ಎಚ್ಚರಿಸಿದ್ದವು.

ಇದು ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಮೇಲೆ ತೆಗೆದ ಚಿತ್ರವಾಗಿದ್ದುದರಿಂದ, ಉತ್ತರ ಕೊರಿಯ ಸೈಬರ್ ದಾಳಿ ನಡೆಸಿದೆ ಎಂದು ಅಮೇರಿಕಾ ದೂರಿತ್ತು. ಇದನ್ನು ವಿರೋಧಿಸಿದ್ದ ಉತ್ತರ ಕೊರಿಯಾ, ಇದಕ್ಕೆ ಅಮೇರಿಕಾದ ಮೇಲೆ ದಾಳಿಯ ರೂಪದಲ್ಲಿ ಉತ್ತರ ನೀಡಲಿದ್ದೇವೆ ಎಂದಿತ್ತು.

ಈಗ ಸಾಮಾಜಿಕ ಜಾಲತಾಣಗಳಿಂದ ಸಿನೆಮಾದ ಬಗೆಗಿನ ಎಲ್ಲ ವಿಷಯವನ್ನು ತೆಗೆದು ಹಾಕಿರುವ ಸೋನಿ ಪಿಕ್ಚರ್ಸ್ ಗೆ ಹಾಲಿವುಡ್ ಮತ್ತು ಅಮೇರಿಕಾದ ಜನತೆಯಿಂದ ವಿರೋಧ ಕೇಳಿ ಬರುತ್ತಿದೆ. ಇದು ಪುಕ್ಕಲುತನದ ಇರ್ಧಾರ ಎಂದು ಜನ ಕರೆದಿದ್ದಾರೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಒಬಾಮಾ ಕೂಡ ಇದು ತಪ್ಪು ನಿರ್ಧಾರ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com