ಎಂಎಚ್೩೭೦ ಹೊಡೆದುರುಳಿಸಿದ್ದು ಅಮೇರಿಕಾ ಮಿಲಿಟರಿ: ಮಾಜಿ ಫ್ರೆಂಚ್ ವಿಮಾನಯಾನ ಸಿಇಒ

ಎಂಎಚ್೩೭೦ ಮಲೇಶಿಯಾ ವಿಮಾನ ಕಾಣೆಯಾದ ಪ್ರಕರಣಕ್ಕೆ ಹೊಸ ತಿರುವು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೌಲಾಲಂಪುರ್: ಎಂಎಚ್೩೭೦ ಮಲೇಶಿಯಾ ವಿಮಾನ ಕಾಣೆಯಾದ ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಫ್ರೆಂಚ್ ವಿಮಾನಯಾನದ ಮಾಜಿ ಅಧ್ಯಕ್ಷ, ಭಾರತೀಯ ಮಹಾಸಾಗರದ ಡೀಗೋ ಗಾರ್ಸಿಯಾ ದ್ವೀಪದ ಅಮೇರಿಕಾ ಸೇನಾ ನೆಲೆಯ ಬಳಿ ಅಮೇರಿಕಾ ಸೇನೆಯೇ ಹೊಡೆದುರುಳಿಸಿರುವುದು ಎಂದು ಆಪಾದಿಸಿದ್ದಾರೆ.

ಈಗ ಚಾಲನೆಯಲ್ಲಿ ಇರದ ಪ್ರಾಟಿಯಸ್ ವಿಮಾನಯಾನದ ಮಾಜಿ ಮುಖ್ಯ ನಿರ್ವಾಹಣಾ ಅಧಿಕಾರಿ ಮಾರ್ಕ್ ಡುಗೈನ್ ತಿಳಿಸಿರುವಂತೆ, ಅಮೇರಿಕಾ ಸೇನೆ ಎಂಎಚ್೩೭೦ನ್ನು ಉಗ್ರಗಾಮಿಗಳು ಅಪಹರಿಸಿರಬಹುದೆಂದು ತಿಳಿದು ಭಯೋತ್ಪಾದನಾ ದಾಳಿಯ ಭಯದಿಂದ ವಿಮಾನವನ್ನು ಹೊಡೆದುರುಳಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಫ್ರೆಂಚ್ ವಾರಪತ್ರಿಕೆ "ಪ್ಯಾರಿಸ್ ಮ್ಯಾಚ್" ನಲ್ಲಿ ಬರೆದಿರುವ ಲೇಖನದಲ್ಲಿ ಕಾದಂಬರಿಕಾರರೂ ಆಗಿರುವ ಡುಗೈನ್, ಡೀಗೋ ಗಾರ್ಸಿಯಾ ದ್ವೀಪದ ಬಳಿಯ ಮಾಲ್ಡೀವ್ಸ್ ನಿವಾಸಿಗಳು ವಿಮಾನ ಅತಿ ಕಡಿಮೆ ಎತ್ತರದಲ್ಲಿ ಹಾರುತ್ತಿರುವುದನ್ನು ನನಗೆ ತಿಳಿಸಿದ್ದಾರೆ ಎಂದು ಕೂಡ ಬರೆದಿದ್ದಾರೆ.

ಮಾರ್ಚ್ ೮ ಮಧ್ಯರಾತ್ರಿ  ಕೌಲಾಲಂಪುರದಿಂದ ಬೀಜಿಂಗ್ ಗೆ ಹೊರಟ ಒಂದು ಘಂಟೆಯೊಳಗೆ ನಿಗೂಢ ರೀತಿಯಲ್ಲಿ ಎಂಎಚ್೩೭೦ ವಿಮಾನ ಕಾಣೆಯಾಗಿತ್ತು.

೧೫೪ ಚೈನಾ ನಾಗರಿಕರು ಮತ್ತು ಮಲೇಶಿಯಾದ ೩೮ ನಾಗರಿಕರು ಹಾಗು ಭಾರತದ ಐದು ಜನರನ್ನು ಹೊತ್ತ  ಬೋಯಿಂಗ್ ೭೭೭-೨೦೦ಇಆರ್ ವಿಮಾನ ಅದೇ ಬೆಳಗ್ಗೆ ಬೀಜಿಂಗ್ ನಲ್ಲಿ ಇಳಿಯಬೇಕಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com