ಡ್ಯೂಟಿಯಲ್ಲಿರುವಾಗಲೇ ಬಾರ್ ಡ್ಯಾನ್ಸರ್ ಜತೆ ಕುಣಿದ ಸಬ್‌ಇನ್ಸ್‌ಪೆಕ್ಟರ್!
ಸೂರತ್: ಗುಜರಾತ್ ನ ಸೂರತ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಡ್ಯೂಟಿಯಲ್ಲಿರುವಾಗಲೇ ಮಹಿಳೆಯೊಂದಿಗೆ ಕುಣಿಯುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡಿ ಸುದ್ದಿಯಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಸೂರತ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾರ್ ಡ್ಯಾನ್ಸರ್ ಕುಣಿಯುತ್ತಿದ್ದಾಗ ಸಬ್ ಇನ್ಸ್‌ಪೆಕ್ಟರ್ ಡಿಸಿ ಸೋಲಂಕಿ ಅವರು ಡ್ಯಾನ್ಸರ್‌ಗೆ ನೋಟಿನ ಮಳೆ ಸುರಿಸಿದ್ದಾರೆ. ತದನಂತರ ಆಕೆಯೊಂದಿಗೆ ಕುಣಿಯುತ್ತಿರುವ ವೀಡಿಯೋ ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಆಗಿದ್ದು ಇದು ವಾಟ್ಸಾಪ್ ಮೂಲಕ ಹರಿದಾಡಿದೆ.
ಸೂರತ್‌ನ ದಿಂಡೋಲಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾರ್ಯ ನಿರತ ರಾಗಿರುವಾಗಲೇ ಸೋಲಂಕಿ ಅವರು ಬಾರ್ ಡ್ಯಾನ್ಸರ್ ಜತೆ ಕುಣಿದಿದ್ದಾರೆ. ಈ ವೀಡಿಯೋವನ್ನು ನಾವು ಕೂಡಾ ನೋಡಿದ್ದೇವೆ. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜೆಎಂ ಬಲೋಚ್ ಹೇಳಿದ್ದಾರೆ.
ಸೆಪ್ಟೆಂಬರ್ 19ರಂದು ಸೋಲಂಕಿ ಅವರು 'ವಿಶ್ವಕರ್ಮ ಪೂಜನ್' ಗೆ ಹೋಗಿದ್ದರೆನ್ನಲಾಗುತ್ತಿದೆ. ಅಲ್ಲಿ ಅವರು ಮಹಿಳೆಯೊಂದಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಸೂರತ್ ಪೊಲೀಸರು ಸಿಟಿ ಪೊಲೀಸ್ ಮುಖ್ಯಸ್ಥ ರಾಕೇಶ್ ಆಸ್ತಾನಾ ಅವರಿಗೆ ವರದಿ ಸಲ್ಲಿಸಿದ್ದಾರೆ. ಇದೀಗ ಸೋಲಂಕಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ವಿಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ